ಕಾರವಾರ:ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲವೆಂದೇ ತಾಯಿ ಸೃಷ್ಟಿಸಿದನಂತೆ. ಆ ಮಾತು ಈ ಹೆತ್ತಬ್ಬೆ ನೋಡಿದ್ರೆ ನಿಜವೆನಿಸುತ್ತೆ. ಹೊನ್ನಾವರ ತಾಲೂಕಿನ ಅರೇ ಅಂಗಡಿಯ ತಾಯಿ ಲತಾ ಹುಲಸ್ವಾರ ಅವರಿಗೆ ಚಿಕ್ಕಂದಿನಿಂದಲೇ ಪ್ರಾಣಿಗಳೇ ಪ್ರಪಂಚ, ಬಂಧು-ಬಳಗ ಎಲ್ಲ. ಬೀದಿ ಬದಿ ಅನಾಥ ಪ್ರಾಣಿಗಳು ಕಂಡ್ರೆ ತನ್ನ ಹೆತ್ತ ಮಕ್ಕಳೇ ವೇದನೆ ಪಡ್ತಿವೆಯೇನೋ ಅನ್ನೋ ರೀತಿ ಬಾಧೆ ಪಡ್ತಾರೆ.
ಮದುವೆ ಬಳಿಕ ಇವರು, ಅಪಘಾತವೋ ಇಲ್ಲ ಯಾರೋ ಬಿಟ್ಟು ಹೋದ ಅನಾಥ ಹಸು, ಎಮ್ಮೆ, ನಾಯಿ, ಬೆಕ್ಕುಗಳನ್ನು ಮನೆಗೆ ತಂದು ಆರೈಕೆ ಮಾಡ್ತಿದಾರೆ. ಬಿಡಾಡಿ ದನಗಳನ್ನು ಯಾರೋ ರಾತ್ರೋರಾತ್ರಿ ಸಾಗಿಸುವಾಗ ಮಗ ಲೋಹಿತ್ ಜೊತೆ ಸೇರಿ ರಕ್ಷಿಸಿದ್ದಾರೆ. ತನ್ನ ಮಗನಂತೆಯೇ ಈ ಮೂಕ ಜೀವಿಗಳನ್ನ ಕಾಣ್ತಿದ್ದಾರೆ.