ಕಾರವಾರ (ಉ.ಕ): ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಟ್ವೀಟ್ ಕುರಿತು ಪ್ರತಿಕ್ರಿಯಿಸಲು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ನಿರಾಕರಿಸಿದ್ದಾರೆ. ಕಾರವಾರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳು ಉದ್ಧವ್ ಠಾಕ್ರೆ ಟ್ವೀಟ್ ವಿಚಾರವನ್ನು ಪ್ರಶ್ನಿಸಿದ ವೇಳೆ ಯಾವುದೇ ಪ್ರತಿಕ್ರಿಯೆ ನೀಡದೇ ಧನ್ಯವಾದ ಹೇಳಿ ತೆರಳಿದ್ದಾರೆ.
ಠಾಕ್ರೆ ಉದ್ಧಟತನದ ಬಗ್ಗೆ ವಿಚಾರ ಮಾಡ್ತಾರಂತೆ ಸಂಸದ ಅನಂತ್‌ಕುಮಾರ್ ಹೆಗಡೆ - ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪದೇಪದೆ ಕ್ಯಾತೆ ತೆಗೆದ್ರೂ ಸಹ ಜಿಲ್ಲೆಯ ಪರ ಯಾವುದೇ ಹೇಳಿಕೆ ನೀಡದೇ, ವಿಚಾರ ಮಾಡೋದಾಗಿ ಹೇಳಿ ತೆರಳಿದ್ದಾರೆ..
anath-kumar-hegde
ಉದ್ಧವ್ ಠಾಕ್ರೆ ಮರಾಠಿ ಭಾಷಿಕರಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತುಗಳನ್ನಾಡಿದ್ದು, ಉತ್ತರಕನ್ನಡ ಜಿಲ್ಲೆಯೂ ಗಡಿ ಭಾಗದಲ್ಲಿದ್ದರೂ ಸಹ ಅನಂತ್ ಕುಮಾರ್ ಹೆಗಡೆ ಪ್ರತಿಕ್ರಿಯಿಸಿಲ್ಲ.
ಪ್ರತಿಕ್ರಿಯೆ ನೀಡದೇ ತೆರಳಿದ ಅನಂತ್‌ಕುಮಾರ್ ಹೆಗಡೆ
ಅನಂತ್ ಕುಮಾರ್, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪದೇಪದೆ ಕ್ಯಾತೆ ತೆಗೆದ್ರೂ ಸಹ ಜಿಲ್ಲೆಯ ಪರ ಯಾವುದೇ ಹೇಳಿಕೆ ನೀಡದೇ, ವಿಚಾರ ಮಾಡೋದಾಗಿ ಹೇಳಿ ತೆರಳಿದ್ದಾರೆ.
Last Updated : Jan 18, 2021, 6:00 PM IST