ಕರ್ನಾಟಕ

karnataka

ETV Bharat / state

ಸೆಂಥಿಲ್​​​ ವಿರುದ್ಧ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ಅನಂತಕುಮಾರ್​​ ಹೆಗಡೆ - Ananth Kumar Hegde

ಮಾಜಿ IAS ಅಧಿಕಾರಿ ಸಸಿಕಾಂತ್​​ ಸೆಂಥಿಲ್ ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹೆಗಡೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅನಂತಕುಮಾರ್ ಹೆಗಡೆ ಟ್ವೀಟ್

By

Published : Sep 8, 2019, 10:01 PM IST

ಶಿರಸಿ:ಐಎಎಸ್​ ಅಧಿಕಾರಿ ಸಸಿಕಾಂತ್​​ ಸೆಂಥಿಲ್ ರಾಜೀನಾಮೆ ಹಿನ್ನೆಲೆಯಲ್ಲಿ ಸಸಿಕಾಂತ್​ ಸೆಂಥಿಲ್​ಗೆ ಪಾಕಿಸ್ತಾನಕ್ಕೆ ವಲಸೆ ಹೋಗಿ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ, ತಲಾಖ್, ರಾಮ ಮಂದಿರದ ಬಗ್ಗೆ ಕೇಂದ್ರದ ನಿಲುವು ಸಹಿಸಲಾಗಿಲ್ಲ ಎಂದಿದ್ದ ಮಾಜಿ IAS ಅಧಿಕಾರಿ ಸೆಂಥಿಲ್, ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹೆಗಡೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲೇ ಇದ್ದು ನಮ್ಮ ದೇಶ ಒಡೆಯುವ ಬದಲು ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನೀಯತ್ತು ತೋರಿಸಲಿ ಎಂದು ಟ್ಟೀಟ್ ಮಾಡಿದ್ದಾರೆ.

ABOUT THE AUTHOR

...view details