ಕಾರವಾರ: ತಮ್ಮ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡಿರುವುದಕ್ಕೆ ಟ್ವಿಟ್ಟರ್ ಭಾರತ ವಿರೋಧಿ ಎಂದು ನಿನ್ನೆ ಕಿಡಿಕಾರಿದ್ದ ಸಂಸದ ಅನಂತ ಕುಮಾರ್ ಹೆಗಡೆ ಇಂದು ಕೂಡ ವಾಗ್ದಾಳಿ ಮುಂದುವರಿಸಿದ್ದು, ಫೇಸ್ಬಕ್ ಫೇಜ್ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ತಬ್ಲಿಘಿಗಳ ಬಣ್ಣ ಬಯಲು ಮಾಡಿದ್ದಕ್ಕೆ ಟ್ವಿಟರ್ ಖಾತೆ ಬ್ಲಾಕ್... ವಾಗ್ದಾಳಿ ಮುಂದುವರಿಸಿದ ಅನಂತ ಕುಮಾರ್ - ಅನಂತಕುಮಾರ್ ಹೆಗಡೆ ಲೇಟೆಸ್ಟ್ ನ್ಯೂಸ್
ಸಂಸದ ಅನಂತಕುಮಾರ್ ಹೆಗಡೆ ತಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಕ್ಕೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಸಂಬಂಧ ಲೇಖನ ಬರೆದು ಟ್ವಿಟರ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮಾರಕ ಕೊರೊನಾ ಭೀತಿಯಿರುವ ವಾತಾವರಣದಲ್ಲೂ ಭಾರತದಲ್ಲಿ ತಬ್ಲಿಘಿ ಜಮಾತ್ನ ತಲೆಕೆಟ್ಟ ಮಂದಿ ಸೋಂಕನ್ನು ಹರಡಲು ಮಾಡಿದ ವ್ಯವಸ್ಥಿತ ಸಂಚಿನ ಬಗ್ಗೆ ಪುರಾವೆಗಳ ಸಮೇತ ಸರಣಿ ಲೇಖನಗಳನ್ನು ಬರೆದು ನನ್ನ ಅಧಿಕೃತ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದನ್ನೇ ಸಾಮಾಜಿಕ ಜಾಲತಾಣಗಳ ನನ್ನ ವೈಯುಕ್ತಿಕ ಖಾತೆಯಿಂದ ಹಂಚಿಕೊಂಡಿದ್ದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಲೇಖನಗಳನ್ನು ಲಕ್ಷಾಂತರ ಜನ ಓದಿ ತಮ್ಮ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಬ್ಲಿಘಿಗಳು ಕೊರೊನಾ ಹೆಸರಲ್ಲಿ ಜಿಹಾದ್ನ ಷಡ್ಯಂತ್ರ ರೂಪಿಸಿದ್ದನ್ನು ಪುರಾವೆ ಸಹಿತ ಜನರ ಮುಂದಿಟ್ಟದ್ದನ್ನೇ ಕಾರಣವಾಗಿಟ್ಟುಕೊಂಡು ನನ್ನ ಬರಹವು ಟ್ವಿಟ್ಟರ್ನ ಕಾನೂನುಗಳನ್ನು ಉಲ್ಲಂಘಿಸಿದೆ ಎಂಬ ಕಾರಣ ಮುಂದಿಟ್ಟು ನನ್ನ ಅಧಿಕೃತ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.