ಶಿರಸಿ :ಜಾತಿಗೆ ಓಟು ಕೊಟ್ಟಾಗ ನನ್ನ ಜಾತಿಯವನು ಗೆಲ್ಲಬಹುದು. ಆದರೆ ಸಮಾಜ ಸಾಯುತ್ತದೆ. ಇವತ್ತಿನ ಕರ್ನಾಟಕದ ಅಧೋಗತಿಗೆ ಜಾತಿಯ ರಾಜಕಾರಣ ಮತ್ತು ದುಡ್ಡಿನ ಅಹಂಕಾರ ಕಾರಣ ಎಂದು ಸಂಸದ ಅನಂತಕುಮಾರ್ ಹೆಗಡೆ ಸಮ್ಮಿಶ್ರ ಸರ್ಕಾರದ ಕುರಿತು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸತ್ತೋಗಿದೆ : ಅನಂತ ಕುಮಾರ್ ಹೆಗಡೆ - ಅನಂತಕುಮಾರ್ ಹೆಗಡೆ
ಸಣ್ಣ ಪುಟ್ಟ ಮಳೆಗೆ ಒಡೆಯುವ ಒಡ್ಡು ಬಿಜೆಪಿ ಅಲ್ಲ. ಬಿಜೆಪಿ ಒಂದು ಸಮುದ್ರ. ದುರ್ಬಲ ಒಡ್ಡು ಇದ್ದಲ್ಲ. ಈ ರೀತಿ ಮಳೆ ಬರುತ್ತೆ ಹೋಗುತ್ತೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ-ಸಂಸದ ಅನಂತಕುಮಾರ್ ಹೆಗಡೆ
ಅನಂತ ಕುಮಾರ್ ಹೆಗಡೆ
ಇಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ, ಸುಮ್ಮನೆ ದೊಂಬರಾಟ ನಡೆಸುತ್ತಿದ್ದಾರೆ, ಕರ್ನಾಟಕದಲ್ಲಿ ಏನು ಆಗಬೇಕು ಏನು ಮಾಡಬೇಕು ಎಂಬ ಯೋಜನೆ ಸರ್ಕಾರಕ್ಕಿಲ್ಲ ಎಂದರು.
ಸಣ್ಣ ಪುಟ್ಟ ಮಳೆಗೆ ಒಡೆಯುವ ಒಡ್ಡು ಬಿಜೆಪಿ ಅಲ್ಲ. ಬಿಜೆಪಿ ಒಂದು ಸಮುದ್ರ. ದುರ್ಬಲ ಒಡ್ಡು ಇದ್ದಲ್ಲ. ಈ ರೀತಿ ಮಳೆ ಬರುತ್ತೆ ಹೋಗುತ್ತೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಎಲ್ಲರನ್ನು ಆಪೋಷಣೆಗೆ ತೆಗೆದುಕೊಳ್ಳುವಂತಹ ಸಾಮರ್ಥ್ಯ ಬಿಜೆಪಿಗೆ ಇದೆ ಎಂದರು.