ಕರ್ನಾಟಕ

karnataka

ETV Bharat / state

ಚುನಾವಣೆ ಸನಿಹದಲ್ಲಿ ಅಸ್ನೋಟಿಕರ್ ಟೆಂಪಲ್ ರನ್! ;ಕಾಂಗ್ರೆಸ್​ ಶಾಸಕ ಸಾಥ್​ - undefined

ಕಾಂಗ್ರೆಸ್​-ಜೆಡಿಎಸ್​ ಅಭ್ಯರ್ಥಿ ಆನಂದ ಅಸ್ನೋಟಿಕರ್ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು

ಆನಂದ ಅಸ್ನೋಟಿಕರ್ ಟೆಂಪಲ್ ರನ್

By

Published : Apr 9, 2019, 5:45 AM IST

ಶಿರಸಿ : ಲೋಕಸಭಾ ಚುನಾವಣೆಗೆ ಮತದಾನ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಟೆಂಪಲ್ ರನ್ ಮಾಡುತ್ತಿದ್ದಾರೆ.

ಸೋಮವಾರ ಪ್ರಚಾರ ಸಭೆಗೆ ತೆರಳುವ ಮುನ್ನ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಆನಂದ ಅಸ್ನೋಟಿಕರ್ ಟೆಂಪಲ್ ರನ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದಂತೆ ದೇವಾಲಯಗಳ ಭೇಟಿಯೂ ಹೆಚ್ಚಾಗಿದೆ. ಭಾನುವಾರ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ಅಸ್ನೋಟಿಕರ್ , ಸೋಮವಾರ ಮಧುಕೇಶ್ವರ ದೇವಾಲಯದಕ್ಕೆ ಭೇಟಿ ನೀಡಿದ್ದಾರೆ. ಅಸ್ನೋಟಿಕರ್​ಗೆ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಸಾಥ್​ ನೀಡಿದ್ದರು. ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು ಸಿಗಲೆಂದು ಬೇಡಿಕೊಂಡರು ಎನ್ನಲಾಗಿದೆ.

ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬನವಾಸಿ, ದಾಸನಕೊಪ್ಪ, ಯಲ್ಲಾಪುರ ಸೇರಿ ವಿವಿಧೆಡೆ ಪ್ರಚಾರ ನಡೆಸಿದರು. ಈ ವೇಳೆ ಸಹ ಶಾಸಕ ಹೆಬ್ಬಾರ್, ಅಸ್ನೋಟಿಕರ್​ಗೆ ಸಾಥ್ ನೀಡಿದರು.

For All Latest Updates

TAGGED:

ABOUT THE AUTHOR

...view details