ಕರ್ನಾಟಕ

karnataka

ETV Bharat / state

ಹೆಗಡೆ ಮೇಲೆ ಅತೃಪ್ತಿ: ಬಿಜೆಪಿ ವೋಟು ಜೆಡಿಎಸ್​ಗೆ ಎಂದ ಆನಂದ ಅಸ್ನೋಟಿಕರ್ - undefined

ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದರ ವಿರುದ್ಧ ಆಕ್ರೋಶವಿದೆ ಹೀಗಾಗಿ ಈ ಭಾರಿ ಅನಂತಕುಮಾರ್​​ ಹೆಗಡೆ ಸೋಲು ಖಚಿತವೆಂದು ಜೆಡಿಎಸ್​ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್

By

Published : Mar 28, 2019, 4:03 AM IST

ಶಿರಸಿ :ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತಕುಮಾರ್​ ಹೆಗಡೆ ಮೇಲೆ ಅತೃಪ್ತಗೊಂಡ ಬಿಜೆಪಿ ಪ್ರಮುಖರ ಬೆಂಬಲ ಈ ಬಾರಿ ಜೆಡಿಎಸ್​ಗೆ ಸಿಗಲಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್​ ಹೆಗಡೆ ಬೆಂಬಲಿಸಿದ ಶೇಕಡಾ 75ರಷ್ಟು ಮತದಾರರು ಹಾಗೂ ಬಿಜೆಪಿ ಪ್ರಮುಖರು ಹೆಗಡೆ ಅವರ ನಡೆಯಿಂದ ಈ ಬಾರಿ ಅತೃಪ್ತರಾಗಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಈಗಾಗಲೇ ಬೆಂಬಲದ ಕುರಿತು ಮಾತುಕತೆ ಕೂಡ ನಡೆದಿದೆ ಎಂದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್

22 ವರ್ಷ ಅಧಿಕಾರದಲ್ಲಿದ್ದ ಅನಂತಕುಮಾರ್​​ ಹೆಗಡೆ ಈ ಜಿಲ್ಲೆಗೆ ಯಾವೊಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದೇ ಕಾರಣಕ್ಕೆ ಅವರ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳುವ ಬದಲು ಮೋದಿಗೆ ಮತ ನೀಡಿ ಎನ್ನುತ್ತಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದು, ಈ ಸಾರಿ ಹೆಗಡೆಗೆ ಸೋಲು ನಿಶ್ಚಿತ ಎಂದಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು, ಗೆಲುವಿಗೆ ಸಂಘಟನಾತ್ಮಕವಾಗಿ ಹೋರಾಡಲಾಗುವುದು. ಪ್ರತೀ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ಮಾಡಲು ಸಮಯ ಸಿಗಲಿದೆ. ಸ್ಟಾರ್ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್​ನಿಂದ ಡಿ.ಕೆ.ಶಿವಕುಮಾರ್​ ಜಿಲ್ಲೆಗೆ ಆಗಮಿಸಲಿದ್ದಾರೆ. ಕುಮಾರಸ್ವಾಮಿಯವರು ಜಿಲ್ಲೆಯಲ್ಲಿ ಕನಿಷ್ಠ 3 ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details