ಕರ್ನಾಟಕ

karnataka

ETV Bharat / state

ನಾಮಪತ್ರ ಸಲ್ಲಿಸಿದ ಆನಂದ್ ಅಸ್ನೋಟಿಕರ್... 72 ಕೋಟಿ ರೂ. ಆಸ್ತಿಯ ಸಾಹುಕಾರ - ಕಾರವಾರ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ನಾಮಪತ್ರ ಸಲ್ಲಿಕೆ. ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ. ಸಿಎಂ ಕುಮಾರಸ್ವಾಮಿ ಸೇರಿ ಹಲವರು ಭಾಗಿ. 72 ಕೋಟಿ ರೂ. ಮೌಲ್ಯದ ಆಸ್ತಿಗೆ ಆನಂದ್ ಒಡೆಯ.

ನಾಮಪತ್ರ ಸಲ್ಲಿಸಿದ ಆನಂದ್ ಅಸ್ನೋಟಿಕರ್

By

Published : Apr 5, 2019, 3:56 AM IST

ಕಾರವಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕರು, ಮುಖಂಡರ ಸಮ್ಮುಖದಲ್ಲಿನಾಮಪತ್ರ ಸಲ್ಲಿಸಿದರು.

ನಗರದ ಮಾಲಾದೇವಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾಷಣದ ಬಳಿಕ ತೆರೆದ ಬಸ್ ಮೂಲಕ ನಾಯಕರ ಜೊತೆ ಆನಂದ್ ಅಸ್ನೋಟಿಕರ್ ಮೆರವಣಿಗೆ ನಡೆಸಿದರು. ಬಳಿಕ ನಾಮಪತ್ರ ಸಲ್ಲಿಕೆಗೆ ಆನಂದ್ ಅಸ್ನೋಟಿಕರ್, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಜೆಡಿಎಸ್ ಮುಖಂಡ ಇನಾಯಿತ್ ಉಲ್ಲಾ ಶಾಬಂದ್ರಿ, ಎಂಎಲ್ ಸಿ ಘೋಟ್ನೇಕರ್ ತೆರಳಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಆನಂದ್ ಅಸ್ನೋಟಿಕರ್


ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 23 ವರ್ಷಗಳಿಂದ ಕ್ಷೇತ್ರಕ್ಕೆ ಏನು ಮಾಡದ ಅನಂತಕುಮಾರ್ ಹೆಗಡೆಯನ್ನು ಸೋಲಿಸಲು ಜನತೆ ಮುಂದಾಗಬೇಕಿದೆ. ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ, ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಪ್ರಯತ್ನ ನಡೆಸುವುದಾಗಿ ಇದೇ ವೇಳೆ ವಾಗ್ದಾನ ಮಾಡಿದರು.

ಆನಂದ್ ಅಸ್ನೋಟಿಕರ್ ಆಸ್ತಿ ಎಷ್ಟು ಗೊತ್ತಾ..?

ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಆನಂದ ಅಸ್ನೋಟಿಕರ್ ತಮ್ಮ ಆಸ್ತಿ ವಿವರ ತಿಳಿಸಿದ್ದಾರೆ. ಒಟ್ಟು 72.19 ಕೋಟಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಪ್ಲ್ಯಾಟ್, ಗೋವಾದ ಕಾಣಕೋಣ ಅಗೋಂಡಾ, ಬೆಂಗಳೂರಿನ ಮತ್ತಿಕೆರೆ ಸೇರಿದಂತೆ ವಿವಿಧ ಕಡೆ ಇರುವ ಕೃಷಿ ಭೂಮಿ, ಚಿತ್ತಾಕುಲದ ಹೊಟೇಲ್, ತಾಯಿ ಶುಭಲತಾ ಅಸ್ನೋಟಿಕರ್ ಹೆಸರಿನಲ್ಲಿ ಕಾರವಾರದ ಮನೆ, ಕಾಣಕೋಣದ ಕೃಷಿ ಭೂಮಿ ಸೇರಿದಂತೆ 66,06,37,429 ರೂ. ಸ್ಥಿರಾಸ್ತಿ ಹೊಂದಿದ್ದಾರೆ.


ಇನ್ನು ಚರಾಸ್ತಿ ಒಟ್ಟು 6,12,79,472 ರೂ. ಇದ್ದು, ತಮ್ಮ ಕೈಯಲ್ಲಿ 4 ಲಕ್ಷ ರೂ. ನಗದು, ಪತ್ನಿ ಗೌರಿ ಅವರ ಬಳಿ ಇರುವ 75 ಸಾವಿರ ರೂ. ನಗದು ಹಾಗೂ ತಾಯಿ ಶುಭಲತಾ ಅಸ್ನೋಟಿಕರ್ ಬಳಿ 25 ಸಾವಿರ ರೂ. ನಗದು, ಎರಡು ಮರ್ಸಿಡಿಸ್ ಬೆಂಜ್ ಹಾಗೂ ಒಂದು ಇನ್ನೋವಾ ಕಾರು ಮತ್ತು ಒಂದು ಹುಂಡೈ ಕಾರು, ಒಂದು ಪಲ್ಸರ್ ಬೈಕ್, ತಾಯಿಯ ಬಳಿ ಇರುವ ಒಂದು ಹುಂಡೈ ಕಾರು, ಬಂಗಾರ, ಬ್ಯಾಂಕ್ ಠೇವಣಿ ಸೇರಿ ಚರಾಸ್ತಿ ಹೊಂದಿದ್ದಾರೆ.


ಇದಲ್ಲದೆ 2,38,00806 ಸಾಲ ಹೊಂದಿರುವುದಾಗಿ ಅಪಾಡವಿಟ್‍ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೇ ತಾಯಿ ಶುಭಲತಾ ಅವರಿಗೆ 2,53,55,120 ರೂ.ವನ್ನು ಹೂಡಿಕೆಯಾಗಿ ನೀಡಿರುವುದಾಗಿ ಸಹ ನಮೂದಿಸಿದ್ದಾರೆ.

ABOUT THE AUTHOR

...view details