ಕಾರವಾರ:ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿಯೋರ್ವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಬಾಲಕಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ.
ಜೂನ್ 5ರಂದು ಹೊಲದ ವಿಷಯವಾಗಿ ಸುಭಾನ್‌ಸಾಬ್ ನಬಿಸಾಬ್ ಹುಲಗುರ ಹಾಗೂ ಮುಂಡಗೋಡ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ನಡುವೆ ಜೋರಾದ ಮಾತುಕತೆ ನಡೆದಿದೆ. ಇದನ್ನು ದೂರದಿಂದಲೇ ನೋಡುತ್ತಿದ್ದ ಬಾಲಕಿ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಿದ್ದಳು. ಆದರೆ ಇದನ್ನು ಕಂಡ ಇನ್ಸ್ಪೆಕ್ಟರ್, ಬಾಲಕಿಯಿಂದ ಮೊಬೈಲ್ ಕಸಿದುಕೊಂಡು ವಿಡಿಯೋ ಯಾಕೆ ಮಾಡುತ್ತಿದ್ದೀಯಾ? ಬಹಳ ಹುಷಾರಿದ್ದಿ, ನಿನ್ನ ಚರ್ಮ ಸುಲಿಯುತ್ತೇನೆ ಎಂದು ಧಮ್ಕಿ ಹಾಕಿ, ನೀವು ಎಲ್ಲರೂ ಪೊಲೀಸ್ ಠಾಣೆಗೆ ಬರಬೇಕೆಂದು ಹೇಳಿದ್ದರಂತೆ.