ಶಿರಸಿ: ಸೂರ್ಯನಿಗೆ ತಗುಲಿದ ಗ್ರಹಣ ಇಂದು ಸರ್ಕಾರಿ ಅಧಿಕಾರಿಗಳಿಗೂ ತಾಗಿದಂತಿದೆ. ಶಿರಸಿಯ ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಗ್ರಹಣದ ನೆಪದಿಂದ ತಮ್ಮ ಕೆಲಸದಿಂದ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ.
ಗ್ರಹಣದ ನೆಪವೊಡ್ಡಿ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಚಕ್ಕರ್ - ಶಿರಸಿ ಸರ್ಕಾರಿ ಕಚೇರಿಗಳು ಬಂದ್
ಗ್ರಹಣದ ಹಿನ್ನೆಲೆಯಲ್ಲಿ ಇಂದು ಶಿರಸಿಯ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ಆಗಿವೆ.
![ಗ್ರಹಣದ ನೆಪವೊಡ್ಡಿ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಚಕ್ಕರ್ All government office Bandh in Sirsi](https://etvbharatimages.akamaized.net/etvbharat/prod-images/768-512-5498328-thumbnail-3x2-net.jpg)
ಗ್ರಹಣದ ಹಿನ್ನೆಲೆ: ಶಿರಸಿ ಸರ್ಕಾರಿ ಕಚೇರಿಗಳು ಬಂದ್
ಗ್ರಹಣದ ಹಿನ್ನೆಲೆ: ಶಿರಸಿ ಸರ್ಕಾರಿ ಕಚೇರಿಗಳು ಬಂದ್
ಬೆಳಗ್ಗೆ ಸಮಯ 10:30 ಆದರೂ ಯಾವ ಸರ್ಕಾರಿ ಸಿಬ್ಬಂದಿಯೂ ಕಚೇರಿಗೆ ಕೆಲಸಕ್ಕೆ ಬಾರದೇ ಗ್ರಹಣ ಎಂದು ಮನೆಯಲ್ಲೇ ಸಮಯ ಕಳೆದಿದ್ದಾರೆ. ನಗರದ ತಹಶೀಲ್ದಾರ ಕಚೇರಿ ಸೇರಿದಂತೆ ಆಹಾರ ಇಲಾಖೆಯ ಕಚೇರಿಗಳು ಬಂದ್ ಆಗಿದ್ದವು.
ಇನ್ನೂ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಹೋಟೆಲ್ಗಳು ಬಂದ್ ಆಗಿದ್ದವು. ರಸ್ತೆ ಕೂಡ ಖಾಲಿ ಹೊಡೆಯುತ್ತಿತ್ತು.