ಕರ್ನಾಟಕ

karnataka

ETV Bharat / state

ಕಡಲಿನಲ್ಲಿ ಅಲೆಗಳ ಅಬ್ಬರ: ಆ್ಯಂಕರ್​​​ ತುಂಡಾಗಿ ದಡಕ್ಕೆ ಅಪ್ಪಳಿಸಿದ ಬೋಟ್! - Karwar Orange alert

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್​ ಕಡಲ ತೀರದಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಒಂದು ಬೋಟ್ ಹಾಗೂ ಪಾತಿ ದೋಣಿ ದಡಕ್ಕೆ ಅಪ್ಪಳಿಸಿ ಹಾನಿಗೊಳಗಾಗಿದೆ.

ಆ್ಯಂಕರ್ ತುಂಡಾಗಿ ದಡಕ್ಕೆ ಅಪ್ಪಳಿಸಿದ  ದೋಣಿ
ಆ್ಯಂಕರ್ ತುಂಡಾಗಿ ದಡಕ್ಕೆ ಅಪ್ಪಳಿಸಿದ ದೋಣಿ

By

Published : Sep 21, 2020, 10:51 AM IST

ಕಾರವಾರ: ಅಲೆಯ ಅಬ್ಬರಕ್ಕೆ ಲಂಗರು ಹಾಕಿದ್ದ ಒಂದು ಬೋಟ್ ಹಾಗೂ ಪಾತಿ ದೋಣಿ ದಡಕ್ಕೆ ಅಪ್ಪಳಿಸಿ ಹಾನಿಗೊಳಗಾಗಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕಡಲಿನಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳಿದ್ದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಬೋಟ್​ಗಳು ಸೇರಿದಂತೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಬಳಿ ಲಂಗರು ಹಾಕಿವೆ. ಆದರೆ ಹೀಗೆ ಲಂಗರು ಹಾಕಿದ್ದ ಮಜ್ದೂರ್ ಮತ್ತು ಪ್ರಾವಿನೆನ್ಸ್ ಹೆಸರಿನ ಎರಡು ಮೀನುಗಾರಿಕಾ ಬೋಟುಗಳು ಆ್ಯಂಕರ್ ತುಂಡಾಗಿ ದಡಕ್ಕೆ ಬಂದು ಅಪ್ಪಳಿಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಒಂದು ಪಾತಿ ದೋಣಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ಆ್ಯಂಕರ್ ತುಂಡಾಗಿ ದಡಕ್ಕೆ ಅಪ್ಪಳಿಸಿದ ದೋಣಿ

ಮಳೆಯಿಂದಾಗಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಬಂದರು ವ್ಯಾಪ್ತಿಯಲ್ಲಿ ಮಲ್ಪೆ ಮಂಗಳೂರು ಭಾಗದ ಬೋಟ್​ಗಳು ಲಂಗರು ಹಾಕಿವೆ. ಇಂದೂ ಸಹ ಮಳೆ ಹಿನ್ನೆಲೆ ಬಂದರು ಬಳಿಯೇ ಬೀಡು ಬಿಟ್ಟಿವೆ.

ABOUT THE AUTHOR

...view details