ಕರ್ನಾಟಕ

karnataka

ETV Bharat / state

'ಬಾಂಬೆ ಬೇಗಮ್ಸ್' ನಲ್ಲಿ ಉತ್ತರಕನ್ನಡ ಮೂಲದ ಆಧ್ಯಾ! - Adhya plays a role in bombay begum web series

ಮಾರ್ಚ್ 8ರ ಮಹಿಳಾ ದಿನದಂದು ಬಿಡುಗಡೆಯಾಗಲಿರುವ 'ಬಾಂಬೆ ಬೇಗಮ್ಸ್' ಸಿರೀಸ್​​ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ನಟಿ ಆಧ್ಯಾ ಉತ್ತರ ಕನ್ನಡದ ಮೂಲದವರಾಗಿದ್ದಾರೆ. 13 ವರ್ಷದ ಆಧ್ಯಾ ಸದ್ಯ ಸಿಂಗಪೂರ್​ನಲ್ಲಿ ವಾಸವಾಗಿದ್ದು, ಸಣ್ಣ ವಯಸ್ಸಿಗೆ ಹೆಚ್ಚು ಸಾಧನೆ ಮಾಡಿ ಎಲ್ಲರ ಚಿತ್ತ ತಮ್ಮತ್ತ ನೆಡುವಂತೆ ಮಾಡಿದ್ದಾರೆ.

Adhya plays a role in bombay begum web series
ಆಧ್ಯಾ

By

Published : Feb 17, 2021, 11:58 AM IST

ಕಾರವಾರ: ನೆಟ್​​ಫ್ಲಿಕ್ಸ್ ನಲ್ಲಿ ಮೂಡಿಬರಲಿರುವ ಬಾಂಬೆ ಬೇಗಮ್ಸ್' ಸಿರೀಸ್- 1ರಲ್ಲಿ ಉತ್ತರಕನ್ನಡ ಮೂಲದ 13 ವರ್ಷದ ಆಧ್ಯಾ ಆನಂದ ಮುಖ್ಯ ತಾರೆಯರೊಂದಿಗೆ ಕಾಣಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

'ಬಾಂಬೆ ಬೇಗಮ್ಸ್' ನಲ್ಲಿ ಉತ್ತರಕನ್ನಡ ಮೂಲದ ಆಧ್ಯಾ


ಮಾರ್ಚ್ 8ರ ಮಹಿಳಾ ದಿನದಂದು ಬಿಡುಗಡೆಯಾಗಲಿರುವ 'ಬಾಂಬೆ ಬೇಗಮ್ಸ್' ಸಿರೀಸ್, ಬಾಲಿವುಡ್ ನಿರ್ದೇಶಕಿ ಹಾಗೂ ಎಂಡಿಮೋಲ್ ಗ್ರೂಪ್ಸ್ ನ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿರುವ ಈ ಸಿರೀಸ್​​ನಲ್ಲಿ ಪೂಜಾ ಭಟ್​, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್ಠಾಕೂರ್ ಅವರೊಂದಿಗೆ ಆಧ್ಯಾ ಆನಂದ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಬಾಂಬೆ ಬೇಗಮ್ಸ್'
ಆಧ್ಯಾ


ಉತ್ತರ ಕನ್ನಡದ ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ, ಹುಟ್ಟಿದ್ದು ಕೊಡಗಿನಲ್ಲಾದರೂ ಬೆಳೆದಿದ್ದು ದೂರದ ಸಿಂಗಾಪುರ್​ನಲ್ಲಿ. ತನ್ನ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಆಸಕ್ತಿ ತೋರಿದ ಈಕೆ, ಪ್ರತಿಷ್ಠಿತ ಕೇನ್ ಇಂಟರ್​​ನ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ 'ಎ ಯೆಲ್ಲೋ ಬರ್ಡ್' ಸಿನಿಮಾ, 'ಒನ್ ಅವರ್ ಟು ಡೇಲೈಟ್', 'ಸ್ಕೈಸಿಟಿ'ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

'ಬಾಂಬೆ ಬೇಗಮ್ಸ್' ನಲ್ಲಿ ಆಧ್ಯಾ


ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ್ ನ ವಿಜೇತೆಯಾಗಿರುವ ಈಕೆ, ಸಿಂಗಾಪುರ್ ನಲ್ಲಿ ವ್ಹೂಪೀಸ್ ವರ್ಲ್ಡ್ ಸೀಸನ್ 1, 2, 3, 4, ಲಯನ್ ಮಮ್ಸ್ 2, 3, ವರ್ಲ್ಡ್ ವಿಜ್ಜ್ ಸ್ಲೈಮ್ ಪಿಟ್, ಮೆನಂತು ಇಂಟರ್​​ನ್ಯಾಷನಲ್ -2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ.

ಉತ್ತರ ಕನ್ನಡ ಮೂಲದ ಆಧ್ಯಾ

ಪ್ರಪ್ರಥಮ ಬಾರಿಗೆ ಈಕೆ ಜೂನಿಯರ್ ನಿರೂಪಕಿಯಾಗಿ ಝೀ ಟಿವಿಯಲ್ಲಿ ನಡೆಸಿಕೊಟ್ಟಿದ್ದ 'ಬ್ರೈನ್ ಬೂಸ್ಟರ್ಸ್' ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್​ಗಳಲ್ಲಿ ಪ್ರಸಾರ ಕಂಡಿವೆ.


ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಆಧ್ಯ ಸಿಂಗಾಪುರ್ ನ ಸಿಂಗ್ಟೆಲ್ ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್ ನಲ್ಲಿ‌ ನಡೆದ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರಕ್ಕೆ 2016ರಲ್ಲೇ ಈಕೆ ಭಾಜನಳಾಗಿದ್ದಾಳೆ. ಅಲ್ಲದೇ, ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು 'ಮಾಡೆಲ್ಸ್ ವಾಕಿಂಗ್ ರನ್ ವೇ'ನಲ್ಲಿ ಭಾಗವಹಿಸಿದ್ದಕ್ಕಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಕೂಡ ಹೊಂದಿದ್ದಾರೆ.

'ಬಾಂಬೆ ಬೇಗಮ್ಸ್' ನಲ್ಲಿ ಉತ್ತರಕನ್ನಡ ಮೂಲದ ಆಧ್ಯಾ


ಈಕೆ ಸದ್ಯ 'ಬಾಂಬೆ ಬೇಗಮ್ಸ್'ನಲ್ಲಿ ಮುಖ್ಯ ಭೂಮಿಕೆಯ ನಟಿಯರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಭಾರತದಲ್ಲೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾಳೆ. ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ 'ಬಾಂಬೇ ಬೇಗಮ್ಸ್' ಆಡಿಷನ್ ನಲ್ಲಿ ಆಯ್ಕೆಯಾಗಿ ಅವಕಾಶ ಪಡೆದುಕೊಂಡಿದ್ದಾಳೆ. ಸೋಮವಾರ ಈ ಸಿರೀಸ್ ನ ಟ್ರೈಲರ್‌ ಕೂಡ ಬಿಡುಗಡೆಯಾಗಿದ್ದು, ಶಾಯ್ ಇರಾನಿ ಎಂಬ ಹೆಸರಿನಲ್ಲಿ ಆಧ್ಯಾ ಕಾಣಿಸಿಕೊಂಡಿದ್ದಾರೆ. ಆಧ್ಯ ಕನ್ನಡ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳ ಜ್ಞಾನ ಹೊಂದಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಷೆ ಹೊಂದಿರುವುದಾಗಿ ಪಾಲಕರು ತಿಳಿಸಿದ್ದಾರೆ.

ABOUT THE AUTHOR

...view details