ಕಾರವಾರ:ಗೋಕರ್ಣದ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ನಟ, ನಿರ್ದೇಶಕ ಜೋಗಿ ಪ್ರೇಮ್ ಮಂಗಳವಾರ ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು.
ಗೋಕರ್ಣಕ್ಕೆ ನಟ ಜೋಗಿ ಪ್ರೇಮ್ ಭೇಟಿ ಇದೇ ಮೊದಲ ಬಾರಿಗೆ ಗೋಕರ್ಣದ ದೇವಾಲಯಕ್ಕೆ ಆಗಮಿಸಿದ್ದ ಪ್ರೇಮ್ ಆತ್ಮಲಿಂಗವನ್ನು ಸ್ಪರ್ಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಹಾಗಣಪತಿ, ತಾಮ್ರ ಗೌರಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು.
ಬಳಿಕ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದೆ. ಆದರೆ, ಮಹಾಬಲೇಶ್ವರ ದೇವಾಲಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರಕ್ಕೆ ಬಂದಿದ್ದೇನೆ. ದೇವರ ದರ್ಶನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಂಪ್ರದಾಯ, ಆಚಾರ ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇನ್ನೊಮ್ಮೆ ಪತ್ನಿ ನಟಿ ರಕ್ಷಿತಾ ಅವರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದರು. ಬಳಿಕ ಮಹಾಬಲೇಶ್ವರ ದೇವಾಲಯದಲ್ಲಿರುವ ಧವಳಿಗಿರಿ ನಂದಿಯನ್ನು ವೀಕ್ಷಿಸಿ ನಂದಿ ಮೈ ಸವರಿ ಬಾಳೆಹಣ್ಣು ನೀಡಿ ಕೆಲಕಾಲ ಖುಷಿ ಪಟ್ಟರು.
ಓದಿ:ಸುದೀಪ್ ನಟನೆಯ ಬಗ್ಗೆ ನಟಿ ಮಡೋನ್ನಾ ಸೆಬಾಸ್ಟಿಯನ್ ಹೀಗಂತಾರೇ..