ಶಿರಸಿ: ನಗರದ ಸುತ್ತಮುತ್ತ ಗಾಂಜಾ, ಮಾದಕ ವಸ್ತುಗಳ ಬಳಕೆ, ಮಾರಾಟ ನಿಯಂತ್ರಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಈ ಹಿಂದಿನ ಆರೋಪಿಗಳನ್ನು ಕರೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗಾಂಜಾ ನಿಯಂತ್ರಣಕ್ಕೆ ಕ್ರಮ.. ಹಳೆಯ ಆರೋಪಿಗಳಿಗೆ ಖಾಕಿ ಖಡಕ್ ವಾರ್ನಿಂಗ್.. - Latest News In Sirsi
ಜಾತ್ರೆಯ ಸುರಕ್ಷತಾ ದೃಷ್ಟಿಯಿಂದಲೂ ಇಲಾಖೆ ಕಾರ್ಯೋನ್ಮುಖವಾಗಿದೆ. ನಗರ ಮತ್ತು ಹೊಸ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆರೋಪಿಗಳನ್ನು ಠಾಣೆಯ ಬಳಿ ಕರೆಸಿ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗಾಂಜಾ ನಿಯಂತ್ರಣಕ್ಕೆ ಕ್ರಮ
ಡಿವೈಎಸ್ಪಿ ಜಿ ಟಿ ನಾಯಕ ಗಾಂಜಾ ಹಾವಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಕೈಗೊಳ್ಳುತ್ತಿದ್ದಾರೆ. ಜಾತ್ರೆಯ ಸುರಕ್ಷತಾ ದೃಷ್ಟಿಯಿಂದಲೂ ಇಲಾಖೆ ಕಾರ್ಯೋನ್ಮುಖವಾಗಿದೆ.ನಗರ ಮತ್ತು ಹೊಸ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆರೋಪಿಗಳನ್ನು ಠಾಣೆಯ ಬಳಿ ಕರೆಸಿ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಗಾಂಜಾ ನಗರ ಪ್ರವೇಶ ಮಾಡಬಾರದು ಹಾಗೂ ಅಕ್ರಮ ಆಯುಧಗಳು ಓಡಾಡಬಾರದು ಎಂದು ಎಚ್ಚರಿಸಿದ್ದಾರೆ.