ಶಿರಸಿ (ಉತ್ತರ ಕನ್ನಡ): ವಿದೇಶಕ್ಕೆ ಹೋಗಬೇಕು ಎನ್ನುವ ಉದ್ದೇಶದಿಂದ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿ ಪಾಸ್ಪೋರ್ಟ್ ಪಡೆದಿದ್ದ ಹಾಗೂ ನಕಲಿ ಆದಾಯ ತೆರಿಗೆ ಪಾಸ್ಪೋರ್ಟ್ ಮಾಡಿಕೊಟ್ಟ ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಕಲಿ ಆದಾಯ ತೆರಿಗೆ ಪತ್ರ, ಪಾಸ್ಪೋರ್ಟ್ ತಯಾರಿ: ಆರೋಪಿಗಳ ಬಂಧನ - ನಕಲಿ ಪಾಸ್ಪೋರ್ಟ್ ತಯಾ
ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿ ಪಾಸ್ಪೋರ್ಟ್ ಪಡೆದಿದ್ದ ಹಾಗೂ ನಕಲಿ ಆದಾಯ ತೆರಿಗೆ, ಪಾಸ್ಪೋರ್ಟ್ ಮಾಡಿಕೊಟ್ಟ ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಾಸ್ಪೋರ್ಟ್ ಪಡೆಯಲು ಪಾಸ್ಪೋರ್ಟ್ ಅಧಿಕಾರಿಗಳಿಗೆ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ನೀಡಿದ ಶಿರಸಿ ತಾಲೂಕಿನ ಹುಲೇಕಲ್ ಗ್ರಾಮದ ಹಂಚರಕಟ್ಟಾ ಮುಸ್ಲಿಂ ಗಲ್ಲಿಯ ನಿವಾಸಿ ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ (22) ಹಾಗೂ ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಕೊಟ್ಟ ಹುಬ್ಬಳ್ಳಿಯ ಶ್ವೇತಾ ಯಾನೆ ಲಕ್ಷ್ಮೀ ಹಾಗೂ ಕಲಬುರ್ಗಿಯ ನಿಯಾಜ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಪಾಸ್ಪೋರ್ಟ್ ಮಾಡಲು ಬಳಸುತ್ತಿದ್ದ ಲ್ಯಾಪ್ಟಾಪ್, ಎರಡು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ಆರೋಪಿ ಅಬ್ದುಲ್ ರೆಹಮಾನ್ ಅಬ್ದುಲ್ ಗಫಾರ್ ಸಾಬ್ ಈ ಮೊದಲು ಪಾಸ್ಪೋರ್ಟ್ ಪಡೆದಿದ್ದರೂ ಕೂಡಾ ಆತ ಎಸ್ಎಸ್ಎಲ್ಸಿ ಪಾಸಾಗದಿದ್ದ ಕಾರಣದಿಂದಾಗಿ ಆತನಿಗೆ ಇಸಿಎನ್ಆರ್ (ಇಮಿಗ್ರೇಶನ್ ಚೆಕ್ ನಾಟ್ ರಿಕ್ವಾಯರ್ಡ್)ದೊರೆತಿರಲಿಲ್ಲ. ಈ ಕಾರಣದಿಂದಾಗಿ ಆತ ಪಾಸ್ಪೋರ್ಟ್ ಪಡೆಯಲು ಆರೋಪಿಗಳಾದ ಶ್ವೇತಾ ಮತ್ತು ನಿಯಾಜ ಅಹ್ಮದ್ರವರಿಂದ ನಕಲಿ ಆದಾಯ ತೆರಿಗೆ ಪ್ರಮಾಣ ಪತ್ರ ಪಡೆದು ಅರ್ಜಿ ಹಾಕಿದ್ದ. ವಿಚಾರಣೆ ನಡೆಸಿದ ತೆರಿಗೆ ಅಧಿಕಾರಿಗಳು ನಖಲಿ ಆದಾಯ ತೆರಿಗೆ ಪ್ರಮಾಣ ಪಡೆದಿರುವ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.