ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಸುಳ್ಳು ಮರಣ ದಾಖಲೆ ಪ್ರಕರಣ; ಆರೋಪಿ ಹರ್ಷವರ್ಧನ ಪೊಲೀಸ್ ವಶಕ್ಕೆ - Accused arrested for allegation of fake death certificate created

ಹರ್ಷವರ್ಧನ ವಿಚಾರಣೆಯಿಂದ ಜಾಲಿ ಪಟ್ಟಣ ಪಂಚಾಯತ್​ ಸುಳ್ಳು ದಾಖಲೆ ಸೃಷ್ಟಿ ಪ್ರಕರಣದ ಹಿಂದೆ ಇರುವ ಕೈಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Harshvardhana
ಆರೋಪಿ ಹರ್ಷವರ್ಧನ

By

Published : Jan 30, 2022, 9:58 PM IST

ಭಟ್ಕಳ: ಕೋಟ್ಯಂತರ ರೂಪಾಯಿ ವಿಮೆ ಹಣ ಪಡೆಯಲು ಸುಳ್ಳು ಮರಣ ದಾಖಲೆ ಪತ್ರ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಪ್ರಮುಖ ಆರೋಪಿ ಹೆಚ್. ವಿ. ಹರ್ಷವರ್ಧನ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ಮೈಸೂರು ಸೆಂಟ್ರಲ್ ಜೈಲಿನಿಂದ (ವಿಚಾರಣಾಧೀನ ಕೈದಿ ಯುಟಿಪಿ ನಂ.17265) ಕರೆ ತಂದು ಶನಿವಾರ ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮರಣ ಪ್ರಮಾಣ ಪತ್ರ

ಆರೋಪಿಯನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ವಿನಂತಿಸಿಕೊಂಡಿದ್ದು, ನ್ಯಾಯಾಧೀಶರು 7 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಫೆ.5ರಂದು ಬೆಳಗ್ಗೆ 11 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆ.465, 468, 471 ಆರ್/ಡಬ್ಲ್ಯೂ 120 (ಬಿ) ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

ಅಲ್ಲದೇ, ಆತ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸುಳ್ಳು ಮರಣ ದಾಖಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ನ್ಯಾಯಾಲಯ ಆದೇಶ ನೀಡುತ್ತಿದ್ದಂತೆಯೇ ಹರ್ಷವರ್ಧನನ್ನು ಭಟ್ಕಳ ಪಟ್ಟಣದಿಂದ ಹೊರಗೆ ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದಾರೆ.

ಹರ್ಷವರ್ಧನ ವಿಚಾರಣೆಯಿಂದ ಜಾಲಿ ಪಟ್ಟಣ ಪಂಚಾಯತ್​ ಸುಳ್ಳು ದಾಖಲೆ ಸೃಷ್ಟಿ ಪ್ರಕರಣದ ಹಿಂದೆ ಇರುವ ಕೈಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಕರಣ ಹಿನ್ನೆಲೆ: ಮೀನಾಕ್ಷಿ ಬಿ. ಹೆಚ್. ಜಂಗನಗದ್ದೆ ಜಾಲಿ ಇವರ ಹೆಸರಿನಲ್ಲಿ ಅವರ ಮಗ ಹೆಚ್. ವಿ ಹರ್ಷವರ್ಧನ ಮರಣ ದಾಖಲೆ ಪತ್ರ ನೀಡುವಂತೆ ಕಳೆದ ಆಗಸ್ಟ್​ 2021ರಲ್ಲಿ ಭಟ್ಕಳ ಜಾಲಿ ಪಟ್ಟಣ ಪಂಚಾಯತ್​ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಆದರೆ, ಅರ್ಜಿದಾರರು ಹಾಗೂ ಅರ್ಜಿಯಲ್ಲಿ ಹೇಳಲಾದ ಮರಣ ಹೊಂದಿದವರು ಇಬ್ಬರೂ ಭಟ್ಕಳದವರಲ್ಲದೇ ಇರುವುದು ಹಾಗೂ ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿ ಮರಣ ದಾಖಲೆ ಸೃಷ್ಟಿಸಿರುವುದು ಅನುಮಾನಕ್ಕೆ ಕಾರಣವಾಗಿತ್ತು.

ಮರಣ ಹೊಂದಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ವಿಮೆ ಅಧಿಕಾರಿಗಳು ಭಟ್ಕಳದಲ್ಲಿ ಹರ್ಷವರ್ಧನ ವಿಳಾಸ ತಡಕಾಡುತ್ತಿದ್ದಂತೆಯೇ ಪ್ರಕರಣ ಬೆಳಕಿಗೆ ಬಂದಿದೆ. ಜಾಲಿ ಪಟ್ಟಣ ಪಂಚಾಯತ್​ ಸಿಬ್ಬಂದಿ ವಿನಾಯಕ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ನಂತರ ಸಿಪಿಐ ದಿವಾಕರ ಮಾರ್ಗದರ್ಶನದಲ್ಲಿ ಎಸ್‍ ಐ ಸುಮಾ ಬಿ. ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಓದಿ:15 ಸಚಿವರನ್ನ ಕ್ಯಾಬಿನೆಟ್​ನಿಂದ ಕೈಬಿಡಬೇಕು.. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಲು ಮುಂದಾದ ರೇಣುಕಾಚಾರ್ಯ

For All Latest Updates

TAGGED:

ABOUT THE AUTHOR

...view details