ಕರ್ನಾಟಕ

karnataka

ETV Bharat / state

ಅಂಕೋಲಾ ಬಳಿ ಲಾರಿಗೆ ಬಸ್​ ಡಿಕ್ಕಿ: ಓರ್ವ ಸಾವು, 8 ಮಂದಿಗೆ ಗಾಯ - Ankola Police Station

ಅಂಕೋಲಾ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಸ್​ ಡಿಕ್ಕಿಯಾದ ಪರಿಣಾಮ ಪ್ರಯಾಣಿಕನೊಬ್ಬ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

dsd
ಅಂಕೋಲಾ ಬಳಿ ಲಾರಿಗೆ ಬಸ್​ ಡಿಕ್ಕಿ

By

Published : Dec 5, 2020, 11:49 AM IST

ಕಾರವಾರ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಸ್​ ಡಿಕ್ಕಿಯಾದ ಪರಿಣಾಮ ಪ್ರಯಾಣಿಕನೊಬ್ಬ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ಅಂಕೋಲಾದ ಮಾಸ್ತಿಕಟ್ಟಾ ಬಳಿಯ ರಾ.ಹೆ 66 ರಲ್ಲಿ ನಡೆದಿದೆ.

ಬೆಂಗಳೂರಿನಿಂದ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅರ್ಧ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಬಸ್ಸಿನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಓದಿ: ಉತ್ತರಕನ್ನಡ ಜನಮೆಚ್ಚಿದ ಸಿಇಓ ರೋಶನ್ ವರ್ಗಾವಣೆ.. ಪ್ರೀಯಾಂಗ ಎಂ ನೇಮಕ

ಬಸ್‌ನಲ್ಲಿದ್ದ 30 ಪ್ರಯಾಣಿಕರಲ್ಲಿ 8 ಮಂದಿಗೆ ಗಾಯಗಳಾಗಿದ್ದು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details