ಕಾರವಾರ: ಮರಳು ತುಂಬಿದ ಟಿಪ್ಪರ್ ಹರಿದು ಬೀದಿ ಬದಿ ಮಲಗಿದ್ದ ಬಟ್ಟೆ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66ರ ಮಿನಿ ವಿಧಾನಸೌಧದ ಎದುರು ಭಾನುವಾರ ತಡರಾತ್ರಿ ನಡೆದಿದೆ.
ಫುಟ್ಪಾತ್ ಮೇಲೆ ಮಲಗಿದ್ದ ಬಟ್ಟೆ ವ್ಯಾಪಾರಿ ಮೇಲೆ ಹರಿದ ಟಿಪ್ಪರ್! - honnavara national highway accident news
ಮರಳು ತುಂಬಿದ ಟಿಪ್ಪರ್ ಹರಿದು ಬೀದಿ ಬದಿ ಮಲಗಿದ್ದ ಬಟ್ಟೆ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66ರ ಮಿನಿ ವಿಧಾನಸೌಧದ ಎದುರು ಭಾನುವಾರ ತಡರಾತ್ರಿ ನಡೆದಿದೆ.
ನಿದ್ರೆಯಲ್ಲಿದ್ದ ಬಟ್ಟೆ ವ್ಯಾಪಾರಿ ಮೇಲೆ ಹರಿದ ಟಿಪ್ಪರ್..ಹೊಟ್ಟೆಪಾಡಿಗೆ ಬಂದು ಚಿರನಿದ್ರೆಗೆ ಜಾರಿದ ಅಮಾಯಕ..!
ಉತ್ತರಪ್ರದೇಶ ಮೂಲದ ಅಬ್ದುಲ್ ರಜಾಕ್ (21) ಮೃತ ದುರ್ದೈವಿ. ಪಟ್ಟಣದ ಮಿನಿ ವಿಧಾನಸೌಧದ ಎದುರಿಗಿರುವ ಫುಟ್ಪಾತ್ ಸಮೀಪ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಈತ, ಪ್ರತಿ ದಿನದಂತೆ ನಿನ್ನೆಯು ಕೂಡ ತನ್ನ ಅಂಗಡಿ ಮುಂದೆಯೇ ಮಲಗಿದ್ದನಂತೆ. ತಡರಾತ್ರಿ ಯಮನಂತೆ ಬಂದ ಮರಳು ತುಂಬಿದ್ದ ಟಿಪ್ಪರ್, ಏಕಾಏಕಿ ಫುಟ್ಪಾತ್ ಮೇಲೆ ಮಲಗಿದ್ದ ಅಬ್ದುಲ್ ರಜಾಕ್ ಮೇಲೆ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.