ಶಿರಸಿ: ಟ್ರ್ಯಾಕ್ಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ 15 ಜನರು ಗಾಯಗೊಂಡ ಘಟನೆ ಮುಂಡಗೋಡ ತಾಲೂಕು ತಟ್ಟಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಮುಂಡಗೋಡದಲ್ಲಿ ಟ್ರ್ಯಾಕ್ಟರ್ - ಕಾರು ನಡುವೆ ಡಿಕ್ಕಿ: 15 ಜನರಿಗೆ ಗಾಯ - Accident between tractor and car at Mundagoda in Uttar kannada
ಮುಂಡಗೋಡ ಕಡೆಯಿಂದ ಉಗ್ಗಿನಕೇರಿ ಕಡೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ಹಾಗೂ ಯಲ್ಲಾಪುರದಿಂದ ಮುಂಡಗೋಡದತ್ತ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.

15 ಜನರಿಗೆ ಗಾಯ
ಮುಂಡಗೋಡ ಕಡೆಯಿಂದ ಉಗ್ಗಿನಕೇರಿ ಕಡೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ಹಾಗೂ ಯಲ್ಲಾಪುರದಿಂದ ಮುಂಡಗೋಡದತ್ತ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಟ್ರ್ಯಾಕ್ಟರ್‌ನಲ್ಲಿದ್ದ 15 ಜನರಿಗೆ ಗಾಯಗಳಾಗಿದ್ದು, ಗಾಯಗೊಂಡವರು ಹೀರೇಹಳ್ಳಿ ನಿವಾಸಿಗಳೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.