ಕಾರವಾರ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಕುಮಟಾ ಪಟ್ಟಣದ ಪಾಂಡುರಂಗ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಕೇರಳ ರಾಜ್ಯದ ಎರ್ನಾಕುಲಂನ ನಿವಾಸಿಗಳಾದ ಫೆಮಿ ರಾಜೇಶ (35) ಮೃತಪಟ್ಟ ಮಹಿಳೆಯಾಗಿದ್ದಾಳೆ. ಇನ್ನು, ರಾಜೇಶ (38), ಸಬು ಜೊಸೇಫ್ (47), ರ‍್ಯಾಸ್ಲಿ ಸ್ಟ್ಯಾನ್ಲಿ (47), ಎಂಡ್ರೋಸ್ (15), ರೈವ್ (8), ಎಲಿನಾ (8) ರಿಸ್ (4) ಎಬೆನ ಟಿ ಎಸ್ (13) ಎಂಬುವರು ಗಾಯಗೊಂಡಿದ್ದಾರೆ.