ಕರ್ನಾಟಕ

karnataka

ETV Bharat / state

ಬೈಕ್-ಬೊಲೆರೊ ನಡುವೆ ಡಿಕ್ಕಿ: ಬೈಕ್ ಚಾಲಕ ಸ್ಥಳದಲ್ಲಿಯೇ ಸಾವು - ಬೈಕ್ ಮತ್ತು ಬೊಲೆರೊ ನಡುವೆ ಸಂಭವಿಸಿದ ಅಪಘಾತ

ಹೊನ್ನಾವರದ ಕರ್ಕಿ ಬಳಿ ಬೈಕ್​ ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Biker died in spot
ಬೈಕ್ ಚಾಲಕ ಸ್ಥಳದಲ್ಲಿಯೇ ಸಾವು

By

Published : Dec 24, 2019, 3:15 PM IST

ಕಾರವಾರ:ಬೈಕ್ ಮತ್ತು ಬೊಲೆರೊ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಬಳಿ ನಡೆದಿದೆ.

ಹಳದಿಪುರದ ವೆಂಕಟೇಶ ಶೆಟ್ಟಿ (58) ಮೃತಪಟ್ಟ ದುರ್ದೈವಿ.

ಹೊನ್ನಾವರದಿಂದ ಕುಮಟಾ ಕಡೆಕೋಳಿ ತುಂಬಿಸಿಕೊಂಡು ಬರುತ್ತಿದ್ದ ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವವಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಕ್​ನ ಹಿಂಬದಿ ಸವಾರ ಸುಬ್ರಾಯ ಹೆಗಡೆ ಗಾಯಗೊಂಡಿದ್ದು, ಹತ್ತಿರದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details