ಭಟ್ಕಳ:ಮುರುಡೇಶ್ವರ ಪ್ರವಾಸಕ್ಕೆಂದು ಬಂದು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಯುವಕನೋರ್ವ ಸಾವನ್ನಪಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ.
ಮುರುಡೇಶ್ವರಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಸಮುದ್ರಪಾಲು - ಭಟ್ಕಳ ಲೆಟೆಸ್ಟ್ ನ್ಯೂಸ್
ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತನ್ನ ಸ್ನೇಹಿತರೊಂದಿಗೆ ಬಂದಿದ್ದ ವ್ಯಕ್ತಿ ಸಮುದ್ರಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
A youth died in Murudeshwar sea
ಬೆಂಗಳೂರಿನ ಬಾಣಸಂದ್ರದ ನಿವಾಸಿ ಮಂಜುನಾಥ ಮಡಿವಾಳ(20) ಮೃತ ಯುವಕನಾಗಿದ್ದಾನೆ. ಈತ ತನ್ನ 8 ಮಂದಿ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಆಗಮಿಸಿದ್ದನು.
ದೇವರ ದರ್ಶನ ಪಡೆದ ತನ್ನ ಸ್ನೇಹಿತರೊಂದಿಗೆ ಕಡಲ ತೀರದಲ್ಲಿ ಈಜಾಡುತ್ತಿದ್ದ ಈ ವೇಳೆ ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.