ಕಾರವಾರ: ಐವರು ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವಕನೊಬ್ಬ ಕಾಣೆಯಾಗಿರುವ ಘಟನೆ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ. ತಾಲೂಕಿನ ದೊಲ್ ಹಳಗಾದ ಅನುಜ್ ನಾಯ್ಕ (26 ವರ್ಷ) ಎಂಬುವವನೇ ಕಾಣೆಯಾದ ಯುವಕ.
ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವಕ ನಾಪತ್ತೆ! - young man missing
ಕಾರವಾರದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನೊಬ್ಬ ಕಾಣೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕಾಣೆಯಾದ ಯುವಕ
ಬುಧವಾರ ರಾತ್ರಿ ಮೀನು ಹಿಡಿಯಲು ನಾಲ್ವರು ಸ್ನೇಹಿತರೊಂದಿಗೆ ಕಾಳಿ ನದಿ ಹಿನ್ನೀರಿಗೆ ತೆರಳಿದ್ದ ಎನ್ನಲಾಗಿದೆ. ಆದರೆ, ತಡರಾತ್ರಿ ಅಲ್ಲಿಯೇ ಮಲಗಿದ್ದು, ಬೆಳಗ್ಗೆ ಕಾಣೆಯಾಗಿದ್ದಾನೆ. ಬಟ್ಟೆ ಮಾತ್ರ ಇದ್ದು ಇದೀಗ ಯುವಕ ಕಾಣೆಯಾಗಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಈಗಾಗಲೇ ಇತರ ನಾಲ್ವರನ್ನು ವಿಚಾರಣೆ ನಡೆಸಿರುವ ಪೊಲೀಸರು ನಾಪತ್ತೆಯಾದವನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.