ಕಾರವಾರ :ಸ್ನೇಹಿತರೊಂದಿಗೆ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಜೊಯಿಡಾ ತಾಲೂಕಿನ ಅಣಶಿಯಲ್ಲಿ ನಡೆದಿದೆ. ಅಣಶಿಯ ದಿಗಂಬರ ಮಡಿವಾಳ (23) ಕಾಣೆಯಾದ ಯುವಕ ಎಂದು ಗುರುತಿಸಲಾಗಿದೆ.
ಸ್ನೇಹಿತ ಉದಯ ಪೆಡ್ನೇಕರ್ ಹುಟ್ಟುಹಬ್ಬವಿದೆ. ಅಣಶಿ ಫಾರೆಸ್ಟ್ ಡಿಪಾರ್ಟಮೆಂಟ್ನವರು ಕರೆಯುತ್ತಿದ್ದಾರೆ. ನೇಚರ್ ಕ್ಯಾಂಪ್ ಬಳಿ ಇರುವ ಕಾಪೋಯಿ ಹಳ್ಳದ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ಹೋಗಿ ಊಟ ಮಾಡಿ ಬರುತ್ತೇನೆ ಎಂದು ದಿಗಂಬರ ಬೆಳಗ್ಗೆ ಹೋಗಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.