ಕಾರವಾರ:ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ತಲೆ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಕುಮಟಾ ಪಟ್ಟಣದ ಮೂರು ಕ್ರಾಸ್ ಬಳಿ ಇಂದು ನಡೆದಿದೆ.
ಚಿಕಿತ್ಸೆಗೆಂದು ತೆರಳುತ್ತಿದ್ದ ಮಹಿಳೆ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಸಾವು - kannadanews
ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುತ್ತಿದ್ದ ಮಹಿಳೆ ಲಾರಿ-ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ದುರ್ಘಟನೆ ಕುಮಟಾದಲ್ಲಿ ನಡೆದಿದೆ.
![ಚಿಕಿತ್ಸೆಗೆಂದು ತೆರಳುತ್ತಿದ್ದ ಮಹಿಳೆ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/prod-images/768-512-3590493-thumbnail-3x2-surya.jpg)
ಲಾರಿ-ಬೈಕ್ ಡಿಕ್ಕಿ ಮಹಿಳೆ ಸಾವು
ಸ್ವಾತಿ ದೇವಾಸಿ (37) ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ಎಂದು ತಿಳಿದು ಬಂದಿದೆ. ಇವರು ಮೂಲತಃ ಚಿಕ್ಕೋಡಿಯವರಾಗಿದ್ದು, ಕಾರವಾರದ ಕೈಗಾದಲ್ಲಿ ವಾಸವಾಗಿದ್ದರು. ಪತಿಯೊಂದಿಗೆ ಬೈಕ್ ಮೇಲೆ ಕಾರವಾರದಿಂದ ಕುಮಟಾಗೆ ಗರ್ಭಕೋಶದ ಚಿಕಿತ್ಸೆಗೆಂದು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ತಲೆ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ