ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಮತ್ತೆ ಇಬ್ಬರಿಗೆ ಸೋಂಕು; ಆರು ಮಂದಿ ಗುಣಮುಖ! - ಕಾರವಾರ ಕೊರೊನಾ ಲೆಟೆಸ್ಟ್ ನ್ಯೂಸ್‌

ಕಾರವಾರದಲ್ಲಿಂದು ಮತ್ತೆ ಇಬ್ಬರಿಗೆ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Karwar
Karwar

By

Published : Jun 27, 2020, 10:33 PM IST

ಕಾರವಾರ: ಜಿಲ್ಲೆಯಲ್ಲಿ ಆರು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಮತ್ತೆ ಇಬ್ಬರಲ್ಲಿ ಹೊಸದಾಗಿ ಮಾಹಾಮಾರಿ ಕಾಣಿಸಿಕೊಂಡಿದೆ.

ಮುಂಬೈನಿಂದ ಹೊನ್ನಾವರಕ್ಕೆ ವಾಪಸ್ಸಾಗಿದ್ದ ತಂದೆ ಹಾಗೂ ಎರಡು ವರ್ಷದ ಮಗುವಿಗೆ ನಿನ್ನೆ ಸೋಂಕು ದೃಢಪಟ್ಟಿತ್ತು. ಇದೀಗ ಆತನ 32 ವರ್ಷದ ಪತ್ನಿಗೂ ಸೋಂಕು ತಗುಲಿದೆ.

ಇನ್ನು ಆಂಧ್ರಪ್ರದೇಶದಿಂದ ವಾಪಸ್ಸಾಗಿದ್ದ ಭಟ್ಕಳದ 38 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್​​ಗೆ ರವಾನಿಸಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು

ಆರು ಮಂದಿ ಗುಣಮುಖ:

ಜಿಲ್ಲೆಯಲ್ಲಿ ಸೋಂಕಿನಿಂದ ಆರು ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಾರವಾರದ ಇಬ್ಬರು, ಜೊಯಿಡಾ, ಯಲ್ಲಾಪುರ, ಭಟ್ಕಳ ಹಾಗೂ ಸಿದ್ದಾಪುರದ ತಲಾ ಓರ್ವ ಸೇರಿ ಆರು ಮಂದಿ ಗುಣಮುಖರಾಗಿದ್ದಾರೆ.

ABOUT THE AUTHOR

...view details