ಕರ್ನಾಟಕ

karnataka

ETV Bharat / state

ಧ್ಯಾನಕ್ಕೆ ಕುಳಿತಂತೆ ಪೋಸ್ ಕೊಡಲು ಹೋಗಿ ಸ್ನೇಹಿತರೆದುರೇ ನೀರುಪಾಲಾದ ಪ್ರವಾಸಿಗ - tourist drowning water

ಶಿರಸಿ ಮೂಲದ ಸುಬ್ಬು ಗೌಡ (42) ಮೃತಪಟ್ಟ ಪ್ರವಾಸಿಗರು. ವಕೀಲರಾಗಿದ್ದ ಅವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕಡಲ ತೀರದ ಬಳಿಯ ಬಂಡೆ ಮೇಲೆ ಕುಳಿತು ಫೋಟೊ ತೆಗೆದುಕೊಳ್ಳುತ್ತಿರುವಾಗ ಅಲೆಯೊಂದು ಬಡಿದ ರಬಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

Man died in drowning water
ಸ್ನೇಹಿತರೆದುರೇ ನೀರುಪಾಲಾದ ಪ್ರವಾಸಿಗ

By

Published : Sep 16, 2021, 3:54 AM IST

ಕಾರವಾರ: ಸಮುದ್ರತೀರದ ಕಲ್ಲುಬಂಡೆ ಮೇಲೆ ಧ್ಯಾನಕ್ಕೆ ಕುಳಿತ ರೀತಿಯಲ್ಲಿ ಪೋಟೊಗೆ ಪೋಸ್ ಕೋಡಲು ಹೋಗಿ ಪ್ರವಾಸಿಗರೊಬ್ಬರು ಅಲೆಗಳ ರಬಸಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿರುವ ಘಟನೆ ಕುಮಟಾ ತಾಲ್ಲೂಕಿನ ವನ್ನಳ್ಳಿ ಕಡಲತೀರದಲ್ಲಿ ಬುಧವಾರ ನಡೆದಿದೆ.

ಶಿರಸಿ ಮೂಲದ ಸುಬ್ಬು ಗೌಡ (42) ಮೃತಪಟ್ಟ ಪ್ರವಾಸಿಗರು. ವಕೀಲರಾಗಿದ್ದ ಅವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕಡಲ ತೀರದ ಬಳಿಯ ಬಂಡೆ ಮೇಲೆ ಕುಳಿತು ಫೋಟೊ ತೆಗೆದುಕೊಳ್ಳುತ್ತಿರುವಾಗ ಅಲೆಯ ರಬಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಜೊತೆಯಲ್ಲಿದ್ದವರೂ ಕೂಗಿಕೊಂಡಿದ್ದು, ಸ್ಥಳೀಯರು ಬರುವಷ್ಟರಲ್ಲಿ ಸುಬ್ಬುಗೌಡ ನೋಡ ನೋಡುತ್ತಿದ್ದಂತೆ ಅಲೆಗೆ ಕೊಚ್ಚಿ ಹೋಗಿದ್ದಾರೆ.

ಫೋಟೋಗೆ ಪೋಸ್​ ಕೊಡಲು ಹೋಗಿ ನೀರುಪಾಲಾದ ಪ್ರವಾಸಿಗ

ಬಳಿಕ ಸ್ಥಳೀಯ ಮೀನುಗಾರರು, ಪೊಲೀಸರು ಹುಡುಕಾಟ ನಡೆಸಿದ್ದು ಸಂಜೆ ಹೊತ್ತಿಗೆ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:ಕುಡಿದ ಮತ್ತಿನಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪಾಪಿ ಮಗ

ABOUT THE AUTHOR

...view details