ಶಿರಸಿ :ಶಿಕ್ಷಕರೊಬ್ಬರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹೋದ ಅಧಿಕಾರಿಯ ಕಾಲಿಗೆ ಶಿಕ್ಷಕ ಅಡ್ಡ ಬಿದ್ದು ನಮಸ್ಕರಿಸಿ ಕ್ಷಮೆ ಕೇಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬಿಇಒ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ ಕ್ಷಮೆ ಕೇಳಿದ ಶಿಕ್ಷಕ.. ಅದಕ್ಕೆ ಕಾರಣವೂ ಇತ್ತು.. - ಬಿಇಒ ಕಾಲಿಗೆ ಅಡ್ಡ ಬಿದ್ದು ಕ್ಷಮೆ ಕೇಳಿದ ಶಿಕ್ಷಕ
ಶಿಕ್ಷಕರೊಬ್ಬರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹೋದ ಅಧಿಕಾರಿಯ ಕಾಲಿಗೆ ಶಿಕ್ಷಕ ಅಡ್ಡ ಬಿದ್ದು ನಮಸ್ಕರಿಸಿದ ಘಟನೆ ಕಾವಲಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
![ಬಿಇಒ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ ಕ್ಷಮೆ ಕೇಳಿದ ಶಿಕ್ಷಕ.. ಅದಕ್ಕೆ ಕಾರಣವೂ ಇತ್ತು.. A teacher apologized to BEO](https://etvbharatimages.akamaized.net/etvbharat/prod-images/768-512-5371714-thumbnail-3x2-chai.jpg)
ಶಿಕ್ಷಕ ಪ್ರಹ್ಲಾದ್ ಎಂಬುವರೇ ಅಧಿಕಾರಿ ಕಾಲಿಗೆ ಅಡ್ಡಬಿದ್ದವರು. ಇವರು ತನಗೆ ದೇವರು ಮೈಮೇಲೆ ಬರುತ್ತದೆ ಎನ್ನುವ ಕಾರಣ ಮಕ್ಕಳ ಮೈಮೇಲೆ ನಿಂಬೆ ಹಣ್ಣುಗಳನ್ನು ಎಸೆಯುವ ಜೊತೆಗೆ ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಿದ್ದರು. ಇದಲ್ಲದೇ ದೇವರು ಮೈಮೇಲೆ ಬಂದಿದೆ ಎಂದು ಶಾಲೆಯಲ್ಲಿಯೇ ವಿಚಿತ್ರವಾಗಿ ವರ್ತನೆ ತೋರುತ್ತಿದ್ದ ಶಿಕ್ಷಕನ್ನು ನೋಡಿ ಮಕ್ಕಳು ಭಯಪಟ್ಟು ಶಾಲೆಗೆ ಬರದಂತೆ ಮಾಡಿಬಿಟ್ಟಿದ್ದ.
ಇದರಿಂದ ಪೋಷಕರು ಆತಂಕಗೊಂಡು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಡಗೋಡ ಬಿಇಒ ಬಸವರಾಜ್ ವಿಚಾರಣೆಗೆ ಇಂದು ತೆರಳಿದ್ದರು. ಆದರೆ, ಈ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತನೆ ತೋರಿಸಿದ ಶಿಕ್ಷಕ ಏಕಾಏಕಿ ವಿಚಾರಣೆಗೆ ಬಂದಿದ್ದ ಅಧಿಕಾರಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿ ಕ್ಷಮೆ ಕೇಳಿದ್ದಾನೆ.