ಶಿರಸಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಮಲೆನಾಡು ರಮಣೀಯ ಹಾಗೂ ನಯನ ಮನೋಹರ. ಅದೇ ರೀತಿ ಇಲ್ಲಿ ಕಂಡುಬರುವ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ತಳಿ ವಿಶೇಷವಾದದ್ದು. ಹಾಗೆಯೇ ವಿಶಿಷ್ಟವಾದ ಕೀಟವೊಂದು ಸಿದ್ದಾಪುರ ತಾಲೂಕಿನ ಮದ್ದಿನಕೇರಿಯಲ್ಲಿ ಕಾಣಿಸಿಕೊಂಡಿದೆ.
ಇದು ಥೇಟ್ ಎಲೆ ಹಾಗೆ ಕಾಣುತ್ತೆ... ಆದ್ರೆ ಎಲೆಯಲ್ಲ! - undefined
ಎಲೆಗಳಲ್ಲಿ ಎಲೆಯಾಗಿ ಕಾಣಿಸುವಂತಹ ಕೀಟ ಇದು. ಒಣಗಿದ ಬಳಿಕ ಸಾಮಾನ್ಯ ಎಲೆಗಳ ಬಣ್ಣ ಬದಲಾಗುತ್ತದೆ. ಆದ್ರೆ ಈ ಕೀಟ ಹಸಿರು ಸೀಬೆ ಎಲೆಗಳ ಯಥಾವತ್ ಪ್ರತಿರೂಪದಂತಿದೆ.
ಎಲೆಗಳಲ್ಲಿ ಎಲೆಯಾಗಿ ಕಾಣಿಸುವ ಕೀಟ
ಎಲೆಗಳಲ್ಲಿ ಎಲೆಯಾಗಿ ಕಾಣಿಸುವಂತಹ ಕೀಟ ಇದು. ಸಾಮಾನ್ಯ ಎಲೆಗಳು ಒಣಗಿ ಬಣ್ಣ ಬದಲಾಗುತ್ತದೆ. ಆದ್ರೆ ಈ ಕೀಟ ಹಸಿರು ಸೀಬೆ ಎಲೆಗಳ ಯಥಾವತ್ ಪ್ರತಿರೂಪದಂತಿದೆ. ಎಲೆಗಳ ಮಧ್ಯದಲ್ಲಿ ಇದನ್ನು ಗುರುತಿಸುವುದು ಬಲು ಕಷ್ಟ. ಆಹಾರಕ್ಕಾಗಿ ಎಲೆಗಳನ್ನೇ ತಿನ್ನುವ ಈ ವಿಚಿತ್ರ ಕೀಟ ಈ ಭಾಗದಲ್ಲಿ ಕಾಣಿಸಿದ್ದು ಇದೇ ಮೊದಲು ಅಂತಾರೆ ಗ್ರಾಮಸ್ಥರು.
ಒಟ್ಟಿನಲ್ಲಿ ಎಲೆಗಳ ಪ್ರತಿರೂಪದಂತಿರುವ ಕೀಟವೊಂದು ಜನರಲ್ಲಿ ಕುತೂಹಲ ಮುಡಿಸಿದ್ದಂತೂ ಸುಳ್ಳಲ್ಲ.