ಕರ್ನಾಟಕ

karnataka

ETV Bharat / state

ಡಿಸೆಂಬರ್ 26ರಂದು ಶಾಖಾ ಮಠದಲ್ಲಿ ಲೋಕಕಲ್ಯಾಣಾರ್ಥ ಹೋಮ-ಹವನ - bhatkala latest news

ಡಿಸೆಂಬರ್ 26ರಂದು ಭಟ್ಕಳದ ಶಾಖಾ ಮಠವಾದ ಕರಿಕಲ್ ಸಮುದ್ರ ಕಿನಾರೆಯ ಶ್ರೀರಾಮ ಧ್ಯಾನ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ ಹೋಮ-ಹವನ ಹಾಗೂ ಸಮುದ್ರ ಸ್ನಾನ ಕಾರ್ಯಕ್ರಮ ಆಯೋಜಿಸಲಾಗಿದೆ.

A special worship at Bhatkala on december 26
ಡಿಸೆಂಬರ್ 26ರಂದು ಶಾಖಾ ಮಠದಲ್ಲಿ ಲೋಕಕಲ್ಯಾಣಾರ್ಥ ಹೋಮ-ಹವನ

By

Published : Dec 22, 2019, 10:21 PM IST

ಭಟ್ಕಳ: ಡಿಸೆಂಬರ್ 26ರಂದು ಉಜಿರೆ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಟ್ಕಳದ ಶಾಖಾ ಮಠವಾದ ಕರಿಕಲ್ ಸಮುದ್ರ ಕಿನಾರೆಯ ಶ್ರೀರಾಮ ಧ್ಯಾನ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಹೋಮ-ಹವನ ಹಾಗೂ ಸಮುದ್ರ ಸ್ನಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸರಕೇರಿ ಶ್ರೀ ನಿಚ್ಛಲಮಕ್ಕಿ ತಿರುಮಲ ಸಭಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀ ರಾಮ ಕ್ಷೇತ್ರ ಧರ್ಮಸ್ಥಳ ಉಜಿರೆ ಜಿಲ್ಲಾ ಸಮಿತಿ ಟ್ರಸ್ಟಿ ಜೆ.ಎನ್.ನಾಯ್ಕ, ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ನಾಮಧಾರಿ ಸಮಾಜದ ಬಾಂಧವರು ಹಾಗೂ ಸಮಸ್ತ ಹಿಂದು ಬಾಂಧವರು ಪಾಲ್ಗೊಂಡು ಭಗವದ್ ಶ್ರೀ ರಾಮನ ಕೃಪೆಗೆ ಪಾತ್ರರಾಗಿ ಎಂದು ಹೇಳಿದರು.

ಡಿಸೆಂಬರ್ 26ರಂದು ಶಾಖಾ ಮಠದಲ್ಲಿ ಲೋಕಕಲ್ಯಾಣಾರ್ಥ ಹೋಮ-ಹವನ

26 ಡಿಸೆಂಬರ್ ಗುರುವಾರದಂದು ಬೆಳಿಗ್ಗೆ ಗಂಟೆ 8.05 ರಿಂದ ಪೂರ್ವಾಹ್ನ ಗಂಟೆ 11.04ರ ವರೆಗೆ ಸೂರ್ಯಗ್ರಹಣವು ನಡೆಯಲಿದೆ. ಅಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದ ನಗರ, ಧರ್ಮಸ್ಥಳದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಭಟ್ಕಳದ ಶಾಖಾ ಮಠವಾದ ಕರಿಕಲ್ ಸಮುದ್ರ ಕಿನಾರೆಯ ಶ್ರೀರಾಮ ಧ್ಯಾನ ಮಂದಿರದಲ್ಲಿ ವಿಶೇಷ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಶಾಂತಿ ಹೋಮ, ಗಾಯತ್ರಿ ಹವನ, ಆದಿತ್ಯ ಹೃದಯ ಪಠಣ, ವಿಷ್ಣು ಸಹಸ್ರ ನಾಮಾವಳಿಯಿಂದ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹವನಾದಿಗಳನ್ನು ನಡೆಸಲಿದ್ದಾರೆ.

ಅಲ್ಲದೇ ಗ್ರಹಣದ ಪೂರ್ವ ಕಾಲದಲ್ಲಿ ಸಮುದ್ರ ಸ್ನಾನ ಮಾಡುವುದರ ಮೂಲಕ ವಿಶೇಷವಾದ ಭಗವದ್ ಅನುಗ್ರಹ ಫಲಗಳು ಲಭಿಸುತ್ತದೆ. ಹಾಗಾಗಿ ಶ್ರೀ ರಾಮಭಕ್ತರು ಈ ಸಮುದ್ರ ಸ್ನಾನದ ಪುಣ್ಯ ಕ್ಷಣದಲ್ಲಿ ಭಾಗಿಗಳಾಗಿ ಹಾಗೂ ವಿಶೇಷವಾದ ಈ ಯಾಗ ಯಜ್ಞಾದಿಗಳಲ್ಲಿ ಭಾಗವಹಿಸಿ ಭಗವದ್ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.

ಶ್ರೀ ರಾಮ ಕ್ಷೇತ್ರ ಸಮಿತಿಯ ಪ್ರಮುಖರಾದ ಕುಮಟಾದ ಆರ್.ಜೆ.ನಾಯ್ಕ ಮಾತನಾಡಿ, ಈಗಿನ ಯುವಕರಲ್ಲಿ ಧಾರ್ಮಿಕ, ದೈವ ಭಾವ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆ ಗ್ರಹಣ ಕಾಲದಲ್ಲಿ ದೇವತಾ ಪೂಜೆ, ಸಮುದ್ರ ಸ್ನಾನದ ಬಗ್ಗೆ ತಿಳಿಸಬೇಕಾಗಿರುವದು ನಮ್ಮ ಕರ್ತವ್ಯವಾಗಿದೆ. ನಮ್ಮ ಸಮಾಜದ ಸ್ವಾಮಿಗಳಾದ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಸಹ ಈ ಮೂಲಕ ಮುಂದಿನ ಪೀಳಿಗೆಗೆ ಒಂದು ಸಂದೇಶ ರವಾನಿಸುತ್ತಿದ್ದು, ದೈವತ್ವವೇ ಮುಖ್ಯವಾದದ್ದು ಎನ್ನುವ ಅಂಶ ಎಲ್ಲರೂ ತಿಳಿದು ಕೊಳ್ಳಬೇಕಿದೆ ಎಂದು ಹೇಳಿದರು.

ABOUT THE AUTHOR

...view details