ದಾಂಡೇಲಿ(ಉತ್ತರ ಕನ್ನಡ):ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಹೆತ್ತ ತಾಯಿ ಮೇಲೆಯೇ ಒಂದೇ ದಿನದಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿರುವ ಅತ್ಯಂತ ಹೀನ ಕೃತ್ಯ ದಾಂಡೇಲಿಯಲ್ಲಿ ಬೆಳಕಿಗೆ ಬಂದಿದೆ. ಕೂಲಿ ಕೆಲಸಗಾರ 24 ವರ್ಷದ ಜಾಕಿ(ಹೆಸರು ಬದಲಿಸಲಾಗಿದೆ) ಹೇಯ ಕೃತ್ಯ ಎಸಗಿದ ಪಾಪಿ ಮಗ.
ದಾಂಡೇಲಿ ಪಟ್ಟಣದ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ 52 ವರ್ಷದ ತನ್ನ ತಾಯಿ ಜೊತೆ ಈ ಕಾಮುಕ ವಾಸವಾಗಿದ್ದ. ಎಂದಿನಂತೆ ಶನಿವಾರ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ಬಂದಿದ್ದ ಜಾಕಿ ತಡರಾತ್ರಿ ನಿದ್ರೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ ಬಂದು ಸುಮಾರು ಹೊತ್ತು ಒಬ್ಬರೇ ಕುಳಿತು ಬಳಿಕ ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದಾರೆ.