ಕಾರವಾರ:ಕಾಲು ಮುರಿತಕ್ಕೊಳಗಾಗಿ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ಕಡವೆಯೊಂದಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತಾದರೂ ಪ್ರಯೋಜನವಾಗದೆ ಪಶು ವೈದ್ಯರೆದುರೇ ಪ್ರಾಣಬಿಟ್ಟಿರುವ ಘಟನೆ ಕಾರವಾದಲ್ಲಿ ಇಂದು ನಡೆದಿದೆ.
ನಿತ್ರಾಣ ಸ್ಥಿತಿಯಲ್ಲಿದ್ದ ಕಡವೆಗೆ ಆರೈಕೆ... ಚಿಕಿತ್ಸೆ ಫಲಿಸದೆ ವೈದ್ಯರೆದುರೇ ಸಾವು - undefined
ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಕಾಲು ಮುರಿದು ನಿತ್ರಾಣ ಸ್ಥಿತಿಯಲ್ಲಿದ್ದ ಕಡವೆಗೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಪ್ರಯೋಜನವಾಗಲಿಲ್ಲ.
![ನಿತ್ರಾಣ ಸ್ಥಿತಿಯಲ್ಲಿದ್ದ ಕಡವೆಗೆ ಆರೈಕೆ... ಚಿಕಿತ್ಸೆ ಫಲಿಸದೆ ವೈದ್ಯರೆದುರೇ ಸಾವು](https://etvbharatimages.akamaized.net/etvbharat/prod-images/768-512-3321366-237-3321366-1558209132807.jpg)
ಸುಮಾರು 5 ವರ್ಷದ ಗಂಡು ಕಡವೆ ಇದಾಗಿದ್ದು, ನಗರದ ಬಿಣಗಾ ಆದಿತ್ಯ ಬಿರ್ಲಾ ಕಂಪನಿಯ ಆವರಣದ ಪೊದೆಗಳ ನಡುವೆ ಕಾಲು ಮುರಿದು ನಿತ್ರಾಣ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಅರಣ್ಯ ಇಲಾಖೆಗೆ ತಿಳಿಸಿದ್ದರು. ಬಳಿಕ ಚೆಂಡಿಯಾ ಶಾಖೆಯಿಂದ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ ಕಾಲು ಊದಿಕೊಂಡು ನಡೆಯಲಾಗದ ಸ್ಥಿತಿಯಲ್ಲಿತ್ತು.
ತಕ್ಷಣ ಕಡವೆಯನ್ನು ಕಂಪನಿ ವಾಹನದಲ್ಲಿಯೇ ಕಾರವಾರದ ಪಶುವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ನೀಡುತ್ತಿರುವ ವೇಳೆಗೆ ವೈದ್ಯರ ಮುಂದೆ ಕಡವೆ ಮೃತಪಟ್ಟಿದೆ. ಬಳಿಕ ವೈದ್ಯರು ಮೃತ ಕಡವೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಕಡವೆ ಮೃತದೇಹವನ್ನು ಕಾರವಾರ ವಲಯದ ಸೆಂಟ್ರಲ್ ನರ್ಸರಿ ಕಂಪೌಂಡ್ ಆವರಣದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಸಂದರ್ಭ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಹಿರೇಹಳ್ಳಿ ಮಹೇಶ್ , ಹೆಚ್ ಕೆಂಪರಾಜು, ಬೆಳಗುಂಬ ವೆಂಕಟೇಶ್, ಲಕ್ಷ್ಮಿ ನರಸಿಂಹ ಹಾಜರಿದ್ದರು.