ಕಾರವಾರ: ವಿನಾಶದ ಅಂಚಿನಲ್ಲಿರುವ ಮತ್ತು ಅತೀ ಅಪರೂಪದ ಕಡಲಾಮೆಯ ಕಳೇಬರವೊಂದು ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಮಂಗಳವಾರ ಪತ್ತೆಯಾಗಿದೆ.
ಮೃತಪಟ್ಟಿರುವ ಕಡಲಾಮೆ ಗಿಡುಗನ ಕೊಕ್ಕಿನ ರೀತಿಯ ಅಪರೂಪದ ದೇಹದ ರಚನೆ ಹೊಂದಿದೆ. ಇದು ಹವಾಕ್ಸ್, ಬುಲ್ ಟರ್ಟಲ್ ಪ್ರಭೇದಕ್ಕೆ ಸೇರಿದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಈ ಪ್ರಭೇದದ ಕಡಲಾಮೆಗಳು ಅಂಡಮಾನ್ ನಿಕೋಬಾರ್, ಲಕ್ಷ ದ್ವೀಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.
ಇವುಗಳ ಜೀವಿತಾವಧಿ ಸುಮಾರು 50 ರಿಂದ 60 ವರ್ಷವಾಗಿದ್ದು, ಹವಳದ ದ್ವೀಪ ಇವುಗಳ ವಾಸ ಸ್ಥಳವಾಗಿದೆ. ವನ್ಯ ಜೀವಿ ಕಾಯಿದೆ ಅಡಿ ಈ ಅಪರೂಪದ ಆಮೆಗಳು ಸಂರಕ್ಷಿತ ಪ್ರಭೇದವಾಗಿದೆ. ಆದರೆ, ಇದೀಗ ಹೇಗೆ ಸಾವನ್ನಪ್ಪಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದಿದ್ದಾರೆ ಸಾಗರ ವಿಜ್ಞಾನಿ ಶಿವಕುಮಾರ್ ಹರಗಿ.
ಸದ್ಯ ಕಡಲಾಮೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು, ನಂತರ ಕೋಸ್ಟಲ್ ಮರೈನ್ ಮತ್ತು ಇಕೋ ಸಿಸ್ಟಂ ವಿಭಾಗದ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹೂಳಲಾಯಿತು.
ಓದಿ:ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಆರೋಪ: ರೂಪದರ್ಶಿ ಸೇರಿ ಇಬ್ಬರು ಅರೆಸ್ಟ್