ಕಾರವಾರ: ಇಲ್ಲಿನ ಕಡಲತೀರದಲ್ಲಿ 'ಗೂಸ್ ಬಾರ್ನಕಲ್' ಎಂಬ ವಿಶಿಷ್ಟ ಸಮುದ್ರ ಜೀವಿಯೊಂದು ಕಾಣಿಸಿಕೊಂಡಿದೆ. ಈ ಅಪರೂಪದ ಜೀವಿ ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ.
ನಗರದ ಟ್ಯಾಗೋರ್ ಕಡಲತೀರದಲ್ಲಿ ಕಾಣಿಸಿಕೊಂಡ ಕಡಲಜೀವಿಯ ಫೋಟೋ ವಿಡಿಯೋ ಕ್ಲಿಕ್ಕಿಸಲು ಜನ ಮುಗಿಬಿದ್ದಿದ್ದಾರೆ. ನೋಡಲು ಕಲ್ಲುಚಿಪ್ಪಿನಂತಿರುವ ಈ ಜೀವಿ ಚಿಪ್ಪೆ ಕಲ್ಲು ಜಾತಿಗೆ ಸೇರಿದ್ದಲ್ಲ. ಇದು ಸಮುದ್ರದಲ್ಲಿನ ಬಾಟಲ್ಗಳ ಮೇಲೆ ಅಥವಾ ಬೋಟ್ನ ಅಡಿ ಭಾಗದಲ್ಲಿ ಅಂಟಿಕೊಂಡಿರುತ್ತದೆ.