ಭಟ್ಕಳ (ಉತ್ತರಕನ್ನಡ): ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಮನೆಗೆ ಮರಳುವಂತಾಗಿದೆ. ಈ ಘಟನೆ ತಡ ರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ತಾಲೂಕಿನ ಬೈಲೂರಿನ 16 ವರ್ಷದ ಬಾಲಕ, ಮುರ್ಡೇಶ್ವರದ 15ರ ಬಾಲಕಿ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಮತ್ತೊಂದೆಡೆ ಬಾಲಕ ಅವರ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಇಬ್ಬರು ಮುಂಬೈಗೆ ತೆರಳಲು ಅಪ್ರಾಪ್ತರು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.
ಈ ಅಪ್ರಾಪ್ತ ಜೋಡಿ ಮುಂಬೈಗೆ ತೆರಳುವ ರೈಲಿನ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಇವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ರೈಲ್ವೆ ಪೊಲೀಸರಿಗೆ ಹಾಗೂ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಇವರ ಮೇಲೆ ಅನುಮಾನ ಬಂದಿದೆ. ನಂತರ ಬಾಲಕಿಯ ಬಳಿ ತೆರಳಿ ವಿಚಾರಿಸಿದ್ದಾರೆ.