ಕರ್ನಾಟಕ

karnataka

ETV Bharat / state

ಗೋಕರ್ಣದ ಕೋಟಿತೀರ್ಥಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ: ಡೆತ್​ ನೋಟ್​​ನಲ್ಲಿ ಇರೋದೇನು? ​ - ಗೋಕರ್ಣದ ಕೋಟಿತೀರ್ಥಕ್ಕೆ ಹಾರಿ ಆತ್ಮಹತ್ಯೆ

ಬೈಂದೂರು ಮೂಲದ ವ್ಯಕ್ತಿವೋರ್ವ ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರ ಬರೆದಿಟ್ಟು, ಗೋಕರ್ಣದ ಕೋಟಿತೀರ್ಥಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Dead Body
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ

By

Published : Dec 20, 2019, 6:02 PM IST

ಕಾರವಾರ:ಗೋಕರ್ಣದ ಕೋಟಿ ತೀರ್ಥಕ್ಕೆ ಹಾರಿ ವ್ಯಕ್ತಿವೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೈಂದೂರು ಮೂಲದ ಹುಬ್ಬಳ್ಳಿಯಲ್ಲಿ ವಾಸವಿದ್ದ ಮಂಜುನಾಥ್(59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗುರುವಾರ ಗೋಕರ್ಣಕ್ಕೆ ಆಗಮಿಸಿದ್ದ ಈತ, ರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಇದಕ್ಕೂ ಮೊದಲು ಪತ್ರ ಬರೆದಿಟ್ಟಿದ್ದ ಮಂಜುನಾಥ್​, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ

ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಕೋಟಿತೀರ್ಥದಿಂದ ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details