ಭಟ್ಕಳ: ಸಾಲಬಾಧೆ ತಾಳಲಾರದೆ ವ್ಯಕ್ತಿವೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೆಬಲೆ ಪಂಚಾಯಿತಿ ವ್ಯಾಪ್ತಿಯ ಹೊನ್ನಿಗದ್ದೆಯಲ್ಲಿ ನಡೆದಿದೆ.
ಭಟ್ಕಳ: ಸಾಲಬಾಧೆ ತಾಳಲಾರದೆ ವ್ಯಕ್ತಿ ನೇಣಿಗೆ ಶರಣು - ನೇಣು ಬಿಗಿದು ಆತ್ಮಹತ್ಯೆ
ತನ್ನ ಆರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಸಾಲದಲ್ಲಿದ್ದ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.
ಆತ್ಮಹತ್ಯೆ
ಹೊನ್ನಿಗದ್ದೆ ನಿವಾಸಿ ಮಂಜುನಾಥ ಮಂಜಪ್ಪ ಮೊಗೇರ(65) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಇವರು ತನ್ನ ಆರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಹೆಚ್ಚಿನ ಸಾಲದಲ್ಲಿದ್ದರು. ಲಾಕ್‍ಡೌನ್ ಹಿನ್ನೆಲೆ ಮತ್ತಷ್ಟು ಸಂಕಷ್ಟ ಅನುಭವಿಸಿದ್ದರು ಎನ್ನಲಾಗ್ತಿದೆ. ಸಾಲಬಾಧೆ ತಾಳಲಾರದೆ ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಪಕ್ಕದ ಕಟ್ಟಿಗೆ ತುಂಬುವ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪುತ್ರ ದಿವಾಕರ ಭಟ್ಕಳ ಗ್ರಾಮೀಣ ಠಣೆಯಲ್ಲಿ ದೂರು ದಾಖಲಿಸಿದ್ದಾರೆ.