ಕರ್ನಾಟಕ

karnataka

ETV Bharat / state

ಶಿರಸಿ: ಸಾಂಬಾರ್​ ಸರಿಯಾಗಿ ಮಾಡಿಲ್ಲವೆಂದು ಗುಂಡು ಹಾರಿಸಿ ತಾಯಿ, ತಂಗಿಯ ಕೊಲೆ - ಉತ್ತರ ಕನ್ನಡ ಕೊಲೆ ನ್ಯೂಸ್​

ಕುಡಿತದ ಚಟ ಹೊಂದಿದ್ದ ಮಗನೊಬ್ಬ ಸಾಂಬಾರ್​ ಸರಿಯಾಗಿ ಮಾಡಿಲ್ಲವೆಂದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಉತ್ತರ ಕನ್ನಡ
ಉತ್ತರ ಕನ್ನಡ

By

Published : Oct 14, 2021, 10:03 AM IST

ಶಿರಸಿ: ಸಾಂಬಾರ್​ ಸರಿಯಾಗಿ ಮಾಡಿಲ್ಲವೆಂದು ಜಗಳ ತೆಗೆದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆ ಗ್ರಾಮದ ಕುಡಗೋಡು ಬಳಿ ನಡೆದಿದೆ.

ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಮೃತ ದುರ್ದೈವಿಗಳು. ಮಂಜುನಾಥ ಹಸ್ಲರ್ (24) ಕುಡಿತದ ಚಟ ಹೊಂದಿದ್ದು, ಕಳೆದ ರಾತ್ರಿ ಸಾಂಬಾರ್​ ಸರಿಯಾಗಿಲ್ಲವೆಂದು ಜಗಳ ತೆಗೆದಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಆರೋಪಿ, ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ‌.

ಈ ಘಟನೆ ನಡೆದ ವೇಳೆ ತಂದೆ ಮನೆಯಲ್ಲಿ ಇರಲಿಲ್ಲ. ಮಗನ ದುಷ್ಕೃತ್ಯವನ್ನು ಖಂಡಿಸಿ ಆತನ ವಿರುದ್ಧ ಸ್ವತಃ ತಂದೆಯೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details