ಕಾರವಾರ: ಕೊರೊನಾ ಲಕ್ಷಣ ಇದ್ದರೂ ಅದನ್ನು ಮುಚ್ಚಿಟ್ಟು ಮದುವೆಯಾದ 26 ವರ್ಷದ ಯುವಕನೋರ್ವ ಐದೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಇದೀಗ ಆತನ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.
ಮಂಗಳೂರಿನಲ್ಲಿ ನೆಲೆಸಿರುವ ಕುಟುಂಬದ ಯುವಕನೋರ್ವ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಈತನಿಗೆ ಭಟ್ಕಳದ ಯುವತಿಯೊಂದಿಗೆ ಜೂ.25 ರಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ಭಟ್ಕಳಕ್ಕೆ ಬಂದು ಮದುವೆಯಾಗಿ ಬಳಿಕ ಮಂಗಳೂರಿಗೆ ತೆರಳಿದ್ದ. ಮದುವೆಗೂ ಮುಂಚೆಯೇ ಈತನಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿತ್ತಾದರೂ, ಆತನಾಗಲಿ ಆತನ ಕುಟುಂಬದವರಾಗಲಿ ಸತ್ಯ ಹೇಳದೆ ಚಿಕಿತ್ಸೆಯನ್ನು ಪಡೆಯದೇ ನಿರ್ಲಕ್ಷ್ಯ ವಹಿಸಿದ್ದರು. ಮಂಗಳೂರಿಗೆ ತೆರಳಿದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೂರು ದಿನದಲ್ಲಿ ವರದಿ ಬರುವ ಹೊತ್ತಿಗೆ ಯುವಕ ಸಾವನ್ನಪ್ಪಿದ್ದಾನೆ.