ಕರ್ನಾಟಕ

karnataka

ETV Bharat / state

ಕಾರವಾರ: ನಾಗದೋಶ ನಿವಾರಣೆಗೆ ಬಂದ ವ್ಯಕ್ತಿ ಕೋಟಿ ತೀರ್ಥದಲ್ಲಿ ಮುಳುಗಿ ಸಾವು - ಗೋಕರ್ಣದ ಕೋಟಿ ತೀರ್ಥ

ನಾಗದೋಶ ನಿವಾರಣೆ ಸಂಬಂಧ ಗೋಕರ್ಣದಲ್ಲಿ ಪೂಜೆ ಸಲ್ಲಿಸಲು ಕುಟುಂಬಸ್ಥರೊಂದಿಗೆ ಆಗಮಿಸಿದ್ದ. ಗೋಕರ್ಣದ ಕೋಟಿ ತೀರ್ಥದಲ್ಲಿ ಈಜಲು ತೆರಳಿದಾಗ ಮುಳುಗಿ ಸಾವನ್ನಪ್ಪಿದ್ದಾನೆ.

drowned
ಈಜಲು ತೆರಳಿ

By

Published : Jun 29, 2020, 7:47 PM IST

ಕಾರವಾರ: ಕೋಟಿತೀರ್ಥದಲ್ಲಿ ಈಜಲು ಇಳಿದಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.

ಧಾರವಾಡ ಮೂಲದ ಶಿವಪ್ಪ ಮಹಾದೇವ ಕಡಕೋಡ (47) ನೀರಿನಲ್ಲಿ ಮುಳುಗಿ ಸಾವನಪ್ಪಿರುವ ವ್ಯಕ್ತಿ. ಈತ ನಾಗದೋಶ ನಿವಾರಣೆ ಸಂಬಂಧ ಗೋಕರ್ಣದಲ್ಲಿ ಪೂಜೆ ಸಲ್ಲಿಸಲು ಕುಟುಂಬಸ್ಥರೊಂದಿಗೆ ಆಗಮಿಸಿದ್ದ. ಗೋಕರ್ಣದ ಕೋಟಿ ತೀರ್ಥದಲ್ಲಿ ಈಜಲು ತೆರಳಿದಾಗ ಮುಳುಗಿ ಸಾವನ್ನಪ್ಪಿದ್ದಾನೆ.

ಈಜಲು ತೆರಳಿ ಕೋಟಿ ತೀರ್ಥದಲ್ಲಿ ಮುಳುಗಿ ಸಾವು

ಪೊಲೀಸರು ಹಾಗೂ ಸ್ಥಳೀಯರು ಆತನ ಮೃತದೇಹವನ್ನು ಹೊರಗೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕುಮಟಾದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details