ಕರ್ನಾಟಕ

karnataka

ETV Bharat / state

ಋತುಸ್ರಾವ ನೈರ್ಮಲ್ಯ ನಿರ್ವಹಣೆಗೆ 'ಕಾಂಫಿ ಕಪ್' - Menstrual Cup

ಪ್ಯಾಡ್‌ಗಳು ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ತಯಾರಿಸಲ್ಪಟ್ಟಿದ್ದು, ಇದರಲ್ಲಿ ಮಾರಕ ರಾಸಾಯನಿಕ ಅಂಶ ಕೂಡಾ ಬಳಸಲಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್, ಸಂತಾನವಾಗದಿರೋದು, ಗರ್ಭಕೋಶದ ಸಮಸ್ಯೆ ಹಾಗೂ ಇತರ ಸ್ತ್ರೀ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ತವೆ. ಅಲ್ಲದೇ, ಪರಿಸರಕ್ಕೂ ಇದು ಬಹಳಷ್ಟು ಮಾರಕ. ಇನ್ನೂ ಬಟ್ಟೆಯ ಬಳಕೆ ಕೂಡ ನೈರ್ಮಲ್ಯ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಹಿಂದೆ ಬಿದ್ದಿದೆ. ಈ ಸಮಸ್ಯೆ ನಿವಾರಣೆಗೆ ವಿನೂತನ ಉತ್ಪನ್ನವೊಂದನ್ನು ತಯಾರಿಸುವ ಮೂಲಕ ಶಿರಸಿಯ ಯುವತಿಯೊಬ್ಬರು ಪರ್ಯಾಯ ಮಾರ್ಗ ಕಂಡುಹಿಡಿದಿದ್ದಾರೆ. ಜೊತೆಗೆ ಈ ಆರೋಗ್ಯಯುತ ಉತ್ಪನ್ನದ ಬಗೆಗೆ ಮಹಿಳೆಯರು, ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

A healthy product prepared by a lady for managing bleeding during periods
ರಕ್ತಸ್ರಾವ ನಿರ್ವಹಣೆಗೆ ಹೆಣ್ಣುಮಳಿಂದ ಆರೋಗ್ಯಯುತ ಉತ್ಪನ್ನ ತಯಾರಿ,,, ಜಾಗೃತಿ

By

Published : Jan 13, 2021, 4:06 PM IST

ಶಿರಸಿ:ಅಸಂಖ್ಯಾತ ಹೆಣ್ಣು ಮಕ್ಕಳು ತಿಂಗಳಿಗೊಮ್ಮೆ ಋತುಚಕ್ರದ ಸುಳಿಗೆ ಸಿಲುಕಿ ನರಳುತ್ತಾರೆ. ಅಷ್ಟೇ ಅಲ್ಲದೆ ಆ ಕಾಲಾವಧಿಯಲ್ಲಿ ದೇಹದಿಂದ ಹೊರಚೆಲ್ಲುವ ರಕ್ತದ ಸೂಕ್ತ ನಿರ್ವಹಣೆಗೆ ಹೆಣಗಾಡುತ್ತಾರೆ. ಈ ಸಂಕಷ್ಟಕ್ಕೆ ಪರಿಹಾರವಾಗಿ ಹೆಣ್ಣುಮಗಳೇ ಒಂದು ಆರೋಗ್ಯಯುತ ಉತ್ಪನ್ನ ತಯಾರಿಸಿದ್ದಾರೆ.

ರಕ್ತಸ್ರಾವ ನಿರ್ವಹಣೆಗೆ ಹೆಣ್ಣುಮಳಿಂದ ಆರೋಗ್ಯಯುತ ಉತ್ಪನ್ನ ತಯಾರಿ,,, ಜಾಗೃತಿ

ಮುಟ್ಟಿನ ಸಮಯದಲ್ಲಿ ದೆಹದಿಂದ ಹೊರಚೆಲ್ಲುವ ರಕ್ತ ಉಡುಪಿಗೆ ತಗಲದಂತೆ ಹೆಣ್ಣುಮಕ್ಕಳು, ಮಹಿಳೆಯರು ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಆದರೆ, ಈ ಪ್ಯಾಡ್‌ಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ತಯಾರಿಸಲ್ಪಟ್ಟಿದ್ದು, ಇದರಲ್ಲಿ ಮಾರಕ ರಾಸಾಯನಿಕ ಅಂಶ ಕೂಡಾ ಬಳಸಲಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್, ಸಂತಾನವಾಗದಿರೋದು, ಗರ್ಭಕೋಶದ ಸಮಸ್ಯೆ ಹಾಗೂ ಇತರ ಸ್ತ್ರೀ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ತವೆ. ಅಲ್ಲದೇ, ಪರಿಸರಕ್ಕೂ ಇದು ಬಹಳಷ್ಟು ಮಾರಕ. ಇನ್ನೂ ಬಟ್ಟೆಯ ಬಳಕೆ ಕೂಡ ನೈರ್ಮಲ್ಯ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಹಿಂದೆ ಬಿದ್ದಿದೆ. ಈ ಸಮಸ್ಯೆ ನಿವಾರಣೆಗೆ ವಿನೂತನ ಉತ್ಪನ್ನವೊಂದನ್ನು ತಯಾರಿಸುವ ಮೂಲಕ ಶಿರಸಿಯ ಯುವತಿಯೊಬ್ಬರು ಪರ್ಯಾಯ ಮಾರ್ಗ ಕಂಡುಹಿಡಿದಿದ್ದಾರೆ. ಜೊತೆಗೆ ಈ ಆರೋಗ್ಯಯುತ ಉತ್ಪನ್ನದ ಬಗೆಗೆ ಮಹಿಳೆಯರು, ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿವಾಸಿ ದಿವ್ಯಾ ಗೋಕರ್ಣ ತಾವೇ ಖುದ್ದಾಗಿ ಇಂಡಿಯಾ ಮೇಡ್ ಕಾಂಫಿ ಕಪ್ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ. ವೈದ್ಯಕೀಯವಾಗಿ ಅನುಮೋದಿಸಲಾಗಿರುವ ಸಿಲಿಕಾನ್‌ನಿಂದ ನಿರ್ಮಿಸಲ್ಪಟ್ಟ ಈ ಕಾಂಫಿ ಕಪ್, ಮಟ್ಟಿನ ಸಮಯದಲ್ಲಿ ಮಹಿಳೆಯರು ಧರಿಸಬಹುದಾದ ಆರೋಗ್ಯಕರ ಹಾಗೂ ಸುರಕ್ಷಿತ ಉತ್ಪನ್ನ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು 10-12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತೀ ತಿಂಗಳು ಇದಕ್ಕೆ ಅಷ್ಟೇ ಬೆಲೆ ಕೊಟ್ಟು ಖರೀದಿಸಬೇಕು. ಆದರೆ, ಕಾಂಫಿ ಕಪ್ ಒಂದು ಬಾರಿ ಖರೀದಿಸಿದರೆ ಸುಮಾರು 10 ವರ್ಷಗಳ ಕಾಲ ಉಪಯೋಗಿಸಬಹುದಾಗಿದೆ. ಕಳೆದ ಒಂದು ವರ್ಷದಿಂದ ಈ ಕಾಂಫಿಕಪ್ ತಯಾರಿ ಬಗ್ಗೆ ಸಿದ್ಧತೆ ನಡೆಸುತ್ತಿದ್ದ ದಿವ್ಯಾ, ಕಳೆದ 5 ತಿಂಗಳಿಂದ ಇದನ್ನು ಬೆಂಗಳೂರಿನಲ್ಲಿ ತಮ್ಮ ಘಟಕದಲ್ಲಿ ತಯಾರಿಸಿ ಜನರಿಗೆ ಇದರ ಅಗತ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು 8 ಮಂದಿ ಮಹಿಳೆಯರು ಇವರಡಿಯಲ್ಲಿ ಕೆಲಸ ಮಾಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಇವುಗಳನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ. ಮಹಿಳೆಯರ ಅಗತ್ಯಕ್ಕೆ ಅನುಗುಣವಾಗಿ ಈ ಕಾಂಫಿಕಪ್‌ನಲ್ಲಿ ಸೈಜ್‌ಗಳಿದ್ದು, ವೈದ್ಯರು ಕೂಡಾ ಇವುಗಳನ್ನು ಬಳಸಲಾರಂಭಿಸಿದ್ದಾರೆ. ಅಲ್ಲದೇ, ಪ್ಯಾಡ್‌ಗಳ ಬದಲು ಈ ಕಾಂಫಿಕಪ್‌ಗಳನ್ನು ಬಳಸಬೇಕೆಂದು ವೈದ್ಯರು ಸೂಚಿಸುತ್ತಿದ್ದಾರೆ.

ಅಂದ ಹಾಗೆ, ಈ ಕಾಂಫಿಕಪ್ ಉತ್ಪನ್ನ ತಯಾರಿಯ ಹಿಂದೆ ದಿವ್ಯಾ ಗೋಕರ್ಣ ಅವರ ಬೇರೆಯೇ ಅನುಭವವಿದೆ. ಮೊದಲು ದಿವ್ಯಾ ಕೂಡಾ ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದರು. ಅವರಿಗಾಗುತ್ತಿದ್ದ ಸಮಸ್ಯೆಗಳು ಇತರ ಹೆಣ್ಣುಮಕ್ಕಳಿಗೂ ಆಗುತ್ತಿದ್ದದ್ದು ಅವರ ಗಮನಕ್ಕೆ ಬಂತು. ಇದಕ್ಕೆ ಪರಿಹಾರಾರ್ಥವಾಗಿ ಸಾಮಾಜಿಕ ಜಾಲತಾಣದಲ್ಲಿ ಅಧ್ಯಯನ ನಡೆಸಿದಾಗ ಈ "ಮೆನ್‌ಸ್ಟ್ರುವಲ್ ಕಪ್" ಬಗ್ಗೆ ತಿಳಿದುಕೊಂಡರು. ಯಾಕಂದ್ರೆ ಸ್ಥಳೀಯವಾಗಿ ಯಾರೂ ಕೂಡಾ ಇದನ್ನು ಬಳಸುತ್ತಿಲ್ಲ ಹಾಗೂ ಇದರ ಬಗ್ಗೆ ತಿಳಿದಿರೋರು ಕೂಡಾ ಯಾರೂ ಇಲ್ಲ. ಪ್ರಾರಂಭದಲ್ಲಿ ಆನ್‌ಲೈನ್ ಮೂಲಕ ಈ ಕಪ್ ಅನ್ನು ಖರೀದಿಸಿ ಬಳಸಿದರಾದ್ರೂ ಅದು ತುಂಬಾ ಗಟ್ಟಿಯಿತ್ತು. ನಂತರ ಈ ಕಪ್‌ಗಳಲ್ಲೂ ಬೇರೆ ಬೇರೆ ಬ್ರಾಂಡ್‌ಗಳಿವೆ ಎಂದು ಅರಿತ ಅವರು, ಆನ್‌ಲೈನ್‌ನಲ್ಲಿ ಸಿಗೋ ಶೇ. 98ರಷ್ಟು ಬ್ರಾಂಡ್‌ಗಳು ಚೀನಾದಿಂದ ಅಮದು ಮಾಡಲಾಗುವಂತದ್ದು ಎಂಬ ಮಾಹಿತಿ ಕೂಡಾ ಪಡೆದುಕೊಂಡರು.‌ ಈ ಕಾರಣದಿಂದ ಭಾರತೀಯ ಬ್ರಾಂಡ್ ತಯಾರಿಸೋ ನಿರ್ಧಾರಕ್ಕೆ ಬಂದರು. ಉತ್ತರ ಭಾರತದಲ್ಲಿರುವ ಅಹ್ಮದಾಬಾದ್‌ನಲ್ಲಿ ಈ ಕಪ್‌ಗಳನ್ನು ತಯಾರಿಸೋ ಘಟಕವನ್ನು ಸಂಪರ್ಕಿಸಿದ ದಿವ್ಯಾ, ಅವರಿಂದ ಮಾಹಿತಿ ಪಡೆದು ಬೆಂಗಳೂರಿನಲ್ಲಿ ತನ್ನದೇ ಘಟಕ ಸ್ಥಾಪಿಸಿದ್ದಾರೆ. ಅಲ್ಲಿಂದ ಉತ್ಪನ್ನಗಳು ಶಿರಸಿಗೆ ವರ್ಗಾಯಿಸಲ್ಪಡುತ್ತಿದ್ದು, ಜಿಲ್ಲೆಯ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಶಿರಸಿಯಲ್ಲಿ ಇವುಗಳು ಪೌಚ್, ಪ್ಯಾಕಿಂಗ್ ಆಗಿ ಬಳಿಕ ರಾಜ್ಯದಲ್ಲಿ ವಿವಿಧೆಡೆ ಅಗತ್ಯವಿದ್ದವರ ಕೈ ಸೇರುತ್ತಿದೆ. ಅಲ್ಲದೇ ಪ್ಯಾಡ್‌ಗಳಿಂದಾಗುವ ಸಮಸ್ಯೆಯ ಬಗ್ಗೆ ಪ್ರತೀ ತಾಲೂಕು, ಜಿಲ್ಲೆಯ ಜನರಿಗೆ ಉಚಿತ ಮಾಹಿತಿ ನೀಡುತ್ತಿರುವ ದಿವ್ಯಾ, ಈ ಕಾಂಫಿ ಕಫ್‌ನ ಉಪಯೋಗಗಳ ಬಗ್ಗೆ ಮಾಹಿತಿ ಕೂಡಾ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಹೆಣ್ಣುಮಕ್ಕಳ, ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಹಾಗೂ ಪರಿಸರ ರಕ್ಷಣೆ ಕಾರಣದಿಂದ ದೇಸೀಯ ಆರೋಗ್ಯಕರ ಉತ್ಪನ್ನ ಕಾಂಫಿ ಕಪ್ ತಯಾರಿಸುತ್ತಿರುವ ದಿವ್ಯಾ ಗೋಕರ್ಣ ಅವರ ಉದ್ದೇಶ ನೆರವೇರಲಿ ಹಾಗೂ ಮಹಿಳಾ ಅಭಿವೃದ್ಧಿ ವಿಚಾರದಲ್ಲಿ ಇವರು ಇತರರಿಗೆ ಮಾದರಿಯಾಗಲಿ ಎನ್ನೋದು ಎಲ್ಲರ ಆಶಯವಾಗಿದೆ.

ABOUT THE AUTHOR

...view details