ಭಟ್ಕಳ/ಉತ್ತರ ಕನ್ನಡ:ಖಾಸಗಿ ವೈದ್ಯೆಯೊಬ್ಬಳು ಮಾಡಿದ ಎಡಿವಟ್ಟಿನಿಂದ ಅಪಾಯದ ಸ್ಥಿತಿಗೆ ತಲುಪಿದ ಗರ್ಭಿಣಿಯನ್ನು ಭಟ್ಕಳದ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ತಾಯಿ- ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಪಟ್ಟಣದ ನಿವಾಸಿ ಆಗಿರುವ ಗರ್ಭಿಣಿ ಒಬ್ಬರು ಭಟ್ಕಳದ ಖಾಸಗಿ ವೈದ್ಯೆಯ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಸಂಜೆ 6 ಗಂಟೆಗೆ ಹೊಟ್ಟೆ ನೋವಿನಿಂದ ಬಳಲುತ್ತಾ ವೈದ್ಯೆಯ ಬಳಿ ತೆರಳಿದ್ದಾರೆ. ಆದರೆ, ಅವರ ಬಳಿ ನರ್ಸಿಂಗ್ ಹೋಮ್ ಇಲ್ಲದ ಕಾರಣ ಪಟ್ಟಣದ ಇನ್ನೊಂದು ಖಾಸಗಿ ನರ್ಸಿಂಗ್ ಹೋಮ್‍ಗೆ ಕಳುಹಿಸಿ ತಾನು ಅಲ್ಲಿಗೆ ಬಂದು ಹೆರಿಗೆ ಮಾಡಿಸುವುದಾಗಿ ತಿಳಿಸಿದ್ದಾರೆ.
ಕುಟುಂಬದವರು ಗರ್ಭಿಣಿಯನ್ನು ಇನ್ನೊಂದು ನರ್ಸಿಂಗ್ ಹೋಮ್‍ಗೆ ಕರೆದೊಯ್ದಿದ್ದಾರೆ. ಆದರೆ, ಖಾಸಗಿ ವೈದ್ಯೆ 6 ಗಂಟೆಯಿಂದ ಸುಮಾರು 10 ಗಂಟೆಯವರೆಗೆ ಸಾಮಾನ್ಯ ಹೆರಿಗೆ ಮಾಡಿಸುವುದಾಗಿ ಸಮಯ ವ್ಯರ್ಥ ಮಾಡಿದ್ದಾರೆ. ಬಳಿಕ ತನ್ನ ಬಳಿ ಯಾವುದೇ ವ್ಯವಸ್ಥೆ ಇಲ್ಲ ಕೂಡಲೆ ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಇದರಿಂದ ಕುಟುಂಬಸ್ಥರು ಕಂಗಾಲಾಗಿ ಶಿರಾಲಿಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡು ಶಿರಾಲಿ ತಲುಪಿದರು. ಅದಾಗಲೇ ಅರವಳಿಕೆ ತಜ್ಞೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು, ಮೊಬೈಲ್ ನಂಬರ್ಗೆ ಕರೆ ಮಾಡಿದರೂ ಸ್ಪಂದಿಸಿಲ್ಲ. ರಾತ್ರಿ 2 ಗಂಟೆಯವರೆಗೆ ಹೀಗೆಯೆ ಸಮಯ ವ್ಯರ್ಥವಾಯಿತು.
ಸರ್ಕಾರಿ ವೈದ್ಯೆಯ ಅಸಹಾಯಕತೆ: