ಶಿರಸಿ (ಉತ್ತರ ಕನ್ನಡ):ಯುವತಿಯೋರ್ವಳ ಎಟಿಎಂ ಪಿನ್ ಹಾಗೂ ಒಟಿಪಿ ಪಡೆದು 24 ಸಾವಿರ ರೂಪಾಯಿ ವಂಚಿಸಿದ ಪ್ರಕರಣ ಬನವಾಸಿಯಲ್ಲಿ ನಡೆದಿದೆ. ಬನವಾಸಿಯ ಕಾವ್ಯ ಹಿರೇಮಾಗಡಿ ಮೋಸ ಹೋದ ಯುವತಿಯಾಗಿದ್ದಾಳೆ.
ಎಟಿಎಂ ಪಿನ್, ಒಟಿಪಿ ಪಡೆದು ಯುವತಿ ಖಾತೆಯಿಂದ 24 ಸಾವಿರ ದೋಚಿದ ವಂಚಕ - Phone Pay
ವಂಚಕನೊಬ್ಬ ಎಟಿಎಂ ಪಿನ್, ಒಟಿಪಿ ಪಡೆದು ಯುವತಿ ಖಾತೆಯಿಂದ 24 ಸಾವಿರ ದೋಚಿದ ಘಟನೆ ಉತ್ತರಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆದಿದೆ.
ಎಟಿಎಂ ಪಿನ್, ಒಟಿಪಿ ಪಡೆದು ಖಾತೆಯಿಂದ 24 ಸಾವಿರ ದೋಚಿದ ವಂಚಕ
ಈಕೆ ಕಳೆದ ಜೂ.15 ರಂದು ಫೋನ್ ಪೆ ಮೂಲಕ 555 ರೂ. ಮೊಬೈಲ್ ರಿಚಾರ್ಜ್ ಮಾಡಿಸಿದ್ದಾರೆ. ಆದ್ರೆ ಆಕಸ್ಮಿಕವಾಗಿ ಬೇರೆ ನಂಬರ್ಗೆ ರಿಚಾರ್ಜ್ ಆಗಿದೆ. ಇದರಿಂದ ಕಸ್ಟಮರ್ ಕೇರ್ಗೆ ಕಾಲ್ ಮಾಡಿ ರಿಚಾರ್ಜ್ ಆದ ನಂಬರ್ನ್ನು ಕಾವ್ಯ ಪಡೆದುಕೊಂಡಿದ್ದಾರೆ.
ಬಳಿಕ ಆ ನಂಬರ್ಗೆ ಕರೆ ಮಾಡಿದಾಗ ಆತ ಎಟಿಎಂ ಪಿನ್ ಹಾಗೂ ಒಟಿಪಿ ಪಡೆದು ಖಾತೆಯಲ್ಲಿದ್ದ 24,912 ರೂ. ಹಣವನ್ನು ದೋಚಿದ್ದಾನೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.