ಕರ್ನಾಟಕ

karnataka

ETV Bharat / state

ಕಷ್ಟಕಾಲದಲ್ಲಿ ಕರುಣೆ ತೋರಿದ ಅಭಿಮಾನಿಯ ಆಶ್ರಯ ತೊರೆದ ನಟಿ ವಿಜಯಲಕ್ಷ್ಮಿ! - ನಟಿ ವಿಜಯಲಕ್ಷ್ಮಿ ನಡೆಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿ

ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿನ ಸಮಾಜ ಸೇವಕ ತುಕರಾಮ್ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರ್‌ನಲ್ಲಿ ಕರೆತಂದು ಕರ್ಕಿಯಲ್ಲಿ ಮನೆ ನೀಡಿ ಆಶ್ರಯ ಒದಗಿಸಿದ್ದರು.

ನಟಿ ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ

By

Published : Sep 24, 2021, 5:01 PM IST

Updated : Sep 26, 2021, 12:14 PM IST

ಕಾರವಾರ:ಆರ್ಥಿಕ ತೊಂದರೆಯಲ್ಲಿದ್ದ ನಟಿ ವಿಜಯಲಕ್ಷ್ಮಿ ಅವರ ನೋವಿಗೆ ಮರುಕ ವ್ಯಕ್ತಪಡಿಸಿದ ಅಭಿಮಾನಿಯೋರ್ವರು ಆಸ್ಪತ್ರೆಯ ಬಿಲ್ ಕಟ್ಟಿ ಊಳಿದುಕೊಳ್ಳಲು ಮನೆಯನ್ನೂ ಮಾಡಿಕೊಟ್ಟಿದ್ದರಂತೆ. ಆದರೆ ನಟಿ ಮಾತ್ರ ಮೂರೇ ದಿನದಲ್ಲಿ ವಿವಿಧ ನೆಪ ಹೇಳಿ, ಮುನಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಅಭಿಮಾನಿಯ ಆಶ್ರಯ ತೊರೆದ ನಟಿ ವಿಜಯಲಕ್ಷ್ಮಿ

ಇತ್ತೀಚೆಗೆ ವಿಜಯಲಕ್ಷ್ಮಿ ಫೇಸ್ಬುಕ್ ಲೈವ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು, ನಾನು ಮತ್ತು ನಮ್ಮ ಕುಟುಂಬ ಆಸ್ಪತ್ರೆಯಲ್ಲಿದ್ದು, ನಮಗೆ ಉಳಿದುಕೊಳ್ಳಲು ಮನೆ ಇಲ್ಲ, ತುಂಬಾ ತೊಂದರೆಯಲ್ಲಿರುವುದಾಗಿ ಹೇಳಿ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿನ ಸಮಾಜ ಸೇವಕ ತುಕಾರಾಮ್ ನಾಯ್ಕ ಹಾಗೂ ಅವರ ಮಗಳು ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿ ಕುಟುಂಬವನ್ನು ತಮ್ಮದೇ ಖರ್ಚಿನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ಕಾರ್‌ನಲ್ಲಿ ಕರೆತಂದು ಕರ್ಕಿಯಲ್ಲಿ ಮನೆ ನೀಡಿ ಆಶ್ರಯ ಒದಗಿಸಿದ್ದರು.

ಒಂದು ವರ್ಷದ ಬಾಡಿಗೆಯನ್ನೂ ತಾವೇ ತುಂಬುವುದಾಗಿಯೂ ತಿಳಿಸಿ ಉಳಿಯುವುದಕ್ಕೆ ಬೆಡ್, ಅಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಎರಡು ದಿನ ಅಡುಗೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ತಾವೇ ಊಟವನ್ನೂ ಪೂರೈಸಿದ್ದರಂತೆ. ಆದರೆ ನಟಿ ಮಾತ್ರ ಎರಡೇ ದಿನದಲ್ಲಿ ಮನೆಯಲ್ಲಿ ಜಿರಲೆ, ಹಲ್ಲಿ ಬರುತ್ತದೆ ಎಂದೆಲ್ಲಾ ನೆಪಗಳನ್ನು ಹೇಳಿ, ಮುನಿಸಿಕೊಂಡು ಇಂದು ಬೆಂಗಳೂರಿಗೆ ತೆರಳಿದ್ದಾರಂತೆ.

ವಿಜಯಲಕ್ಷ್ಮಿ ಅವರ ಊಟ ಸೇರಿದಂತೆ ಇತರೆ ಖರ್ಚುವೆಚ್ಚ ಎಲ್ಲವನ್ನೂ ನೋಡಿಕೊಂಡಿದ್ದ ತುಕಾರಾಮ್ ಆರು ದಿನಗಳಿಂದ ಅವರನ್ನು ಸಹಿಸಿಕೊಂಡು ಬಂದಿದ್ದಾರೆ. ಆದ್ರೆ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಿದರೂ ಮನೆ ಸರಿ ಇಲ್ಲ ಎಂದು ಆಶ್ರಯ ಕೊಟ್ಟವರ ವಿರುದ್ಧವೇ ಅವರು ಮಾತಾಡಿದ್ದಾರೆ. ಇದು ನಮಗೆ ತೀವ್ರ ಬೇಸರ ತರಿಸಿದೆ ಎಂದು ತುಕಾರಾಮ್ ಹೇಳಿದ್ದಾರೆ.

Last Updated : Sep 26, 2021, 12:14 PM IST

ABOUT THE AUTHOR

...view details