ಭಟ್ಕಳ:ಬೆಳ್ನಿ ಎಂಬಲ್ಲಿಕಾಲುಜಾರಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು.
ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಗೆ ಬಿದ್ದ ಹಸುವಿನ ರಕ್ಷಣೆ - ಭಟ್ಕಳ ಅಗ್ನಿಶಾಮಕ ದಳ
ತೆರೆದ ಬಾವಿಗೆ ಬಿದ್ದ ಹಸುವನ್ನು ಹರಸಾಹಸಪಟ್ಟು ಬಾವಿಯಿಂದ ಮೇಲಕ್ಕೆತ್ತಿ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು.
ಬಾವಿಗೆ ಬಿದ್ದ ಹಸು ರಕ್ಷಣೆ
ಗ್ರಾಮದ ಅಹ್ಮದ್ ಏಜೆನ್ಸಿರವರಿಗೆ ಸೇರಿದ್ದ ಜಾಗದಲ್ಲಿ ಸುಮಾರು 20 ಅಡಿ ಆಳದ ಬಾವಿಗೆ ಹಸು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣಾಧಿಕಾರಿ ಎಸ್.ರಮೇಶ್, ಚಾಲಕ ಮಾರುತಿ ಆಚಾರಿ, ತಂತ್ರಜ್ಞ ಶಿವಪ್ರಸಾದ್ ನಾಯ್ಕ, ನಾರಾಯಣ ಪಟಗಾರ, ಮಾರುತಿ ನಾಯ್ಕ, ಚೇತನ ಪಾಟೀಲ್, ಸಚಿನ್ ರಾಠೋಡ, ಶಂಕರ್ ಲಮಾಣಿ ಹಾಗೂ ಗೃಹರಕ್ಷಕ ಸಿಬ್ಬಂದಿ ಅರುಣ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಹಸುವನ್ನು ಬಚಾವ್ ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ 'ಟಗರು' ನೀಡಿ ಗೌರವಿಸಿದ ಎಂಎಲ್ಸಿ ಗೋಪಾಲಸ್ವಾಮಿ