ಕರ್ನಾಟಕ

karnataka

ETV Bharat / state

ವಂಚನೆ ಪ್ರಕರಣ: ಬರೋಬ್ಬರಿ 23 ವರ್ಷಗಳ ನಂತರ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ - Shirazi fraud case

ಯಲ್ಲಾಪುರ ತಾಲೂಕಿನ ಮಂಚಿಕೇರಿಯ ದತ್ತಾತ್ರೇಯ ಹೆಗಡೆ ಬಂಧಿತ ಆರೋಪಿ. ಈತನ‌ ವಿರುದ್ಧ 1998ರಲ್ಲಿ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ದತ್ತಾತ್ರೇಯ ಹೆಗಡೆಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿ
ಆರೋಪಿ

By

Published : Dec 17, 2020, 10:06 PM IST

ಶಿರಸಿ: ನಗರದಲ್ಲಿ ಬಂಗಾರದ ವರ್ತಕರೊಬ್ಬರಿಂದ 6 ಸಾವಿರ ರೂ. ಹಣ ಪಡೆದು ಅದನ್ನು ಮರಳಿಸದೆ ವಂಚಿಸಿದ್ದ ಆರೋಪಿಯೊಬ್ಬನನ್ನು ಶಿರಸಿ ನಗರ ಠಾಣೆ ಪೊಲೀಸರು ಬರೋಬ್ಬರಿ 23 ವರ್ಷಗಳ ನಂತರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಮಂಚಿಕೇರಿಯ ದತ್ತಾತ್ರೇಯ ಹೆಗಡೆ ಬಂಧಿತ ಆರೋಪಿ. ಈತನ‌ ವಿರುದ್ಧ 1998ರಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 1997ರ ಡಿ. 19ರಂದು ತಮ್ಮ ಬಳಿ ಹಣ ಪಡೆದವರು ಮರಳಿಸಿಲ್ಲ ಎಂದು ಅಣ್ಣಪ್ಪ ರಾಯ್ಕರ್ ದೂರು ನೀಡಿದ್ದರು.

ದತ್ತಾತ್ರೇಯ ಹೆಗಡೆ, ಬಂಧಿತ ಆರೋಪಿ

ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ದತ್ತಾತ್ರೇಯ ಹೆಗಡೆಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈಗ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜಾರುಪಡಿಸಿದ್ದಾರೆ.

ABOUT THE AUTHOR

...view details