ಕಾರವಾರ:ಅಲೆಗಳ ಅಬ್ಬರಕ್ಕೆ ಅಪಾಯಕ್ಕೆ ಸಿಲುಕಿದ್ದ ಬಾರ್ಜ್ (ಹಗುರ ನೌಕೆ) ಹಾಗೂ ಅದರಲ್ಲಿದ್ದ 9 ಜನರನ್ನು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಸಮೀಪದ ಸಮುದ್ರ ತೀರದಲ್ಲಿ ನಡೆದಿದೆ.
ಬಾರ್ಜ್ನಲ್ಲಿ ಅಪಾಯಕ್ಕೆ ಸಿಲುಕಿದ್ದ ಪ್ರೀತಂ ಕುಮಾರ, ರಾಮ್ ಜಿ ಶಾ, ರಾಮ್ ಸಿಂಗ್, ಮುನ್ನಾ ಕುಮಾರ್, ಅಜಿತ್ ಕುಮಾರ್, ಸಚಿನ್ ಯಾದವ್, ಮಂಟು ಯಾದವ್, ಪರಸ್ವತ್ ಕ್ರಾಂತಾ, ಅಶೋಕ ಟಿಕ್ರಕ್ಸ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ.
ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಬಾರ್ಜ್ ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಸಾಯಿ ಕೈಲಾಶ್ ಎಂಬ ಹೆಸರಿನ ಬಾರ್ಜ್ ಗಾಳಿ-ಮಳೆಯಿಂದಾಗಿ ಅಲೆಗಳ ಅಬ್ಬರ ಜೋರಾಗಿ ಹಾರವಾಡ ಸಮೀಪ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು. ತಕ್ಷಣ ಮಾಹಿತಿ ಪಡೆದ ಕರಾವಳಿ ಕಾವಲು ಪೊಲೀಸರು, ಸಿಪಿಐ ಶ್ರೀಧರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದರು. ಭಾರಿ ಅಲೆಗಳ ಅಬ್ಬರದ ನಡುವೆಯೂ ಹರಸಾಹಸದೊಂದಿಗೆ ಬಾರ್ಜನ್ನು ಬೇಲೆಕೇರಿ ಬಂದರು ಸಮೀಪ ಸುರಕ್ಷಿತವಾಗಿ ಎಳೆದು ತಂದು ಆಂಕರಿಂಗ್ ಮಾಡಲಾಗಿದೆ.
ಅಂಕೋಲಾ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಬಾರ್ಜ್ ಜಿಲ್ಲೆಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಸಮುದ್ರದಲ್ಲಿಯೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾರ್ಜ್ ಇನ್ನೂ 3 ದಿನಗಳ ಕಾಲ ಬೇಲೆಕೇರಿ ಬಂದರು ಸಮೀಪವೇ ಲಂಗರು ಹಾಕಲಿದೆ. ಬಳಿಕ ಮಂಗಳೂರಿಗೆ ತೆರಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಹಸನ್ ಕುಟ್ಟಿ, ಪುನೀತ್ ನಾಯ್ಕ, ಪರ್ವೇಶ್ ಸಾದಿಯೇ, ನಿತಿನ್ ಅಂಕೋಲೇಕರ್, ಗಣರಾಜ ಸಾದಿಯೇ, ಅನಿಲ್ ಅಣ್ಣಪ್ಪ ಮೇಸ್ತಾ, ವೆಂಕಟೇಶ ದುರ್ಗೇಕರ, ರಾಘವೇಂದ್ರ ಬಾನಾವಳಿಕರ್ ಭಾಗವಹಿಸಿದ್ದರು.