ಕಾರವಾರ: ಆಕಸ್ಮಿಕವಾಗಿ ಒಂದೂವರೆ ವರ್ಷದ ಮಗುವೊಂದು ಬಾವಿಗೆ ಬಿದ್ದು ಅಸುನೀಗಿರುವ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮ ನಗರದಲ್ಲಿ ನಡೆದಿದೆ.
ಆಕಸ್ಮಿಕವಾಗಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು! - ಕಾರವಾರ ಸುದ್ದಿ
ಕುಜರತಲಿ ಹಾಗೂ ಬಸೀರಾ ದಂಪತಿಗಳ ಕುಟುಂಬ 4 ದಿನಗಳ ಹಿಂದಷ್ಟೇ ಬಾಡಿಗೆಗೆ ಬಂದು ಈ ಮನೆಯಲ್ಲಿ ವಾಸವಾಗಿದ್ದರು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲಾಗಿತ್ತಾದರೂ ಅವರು ಸ್ಥಳಕ್ಕೆ ಆಗಮಿಸುವ ಮುನ್ನ ಮಗುವನ್ನು ಸ್ಥಳೀಯ ಯುವಕ ಮೌಲಾಲಿ ಸಿದ್ದಿನ ಮಗುವನ್ನು ಮೇಲೆತ್ತಿದ್ದ.
ಆಕಸ್ಮಿಕವಾಗಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು!
ಖುಷಿ ಕುಜರತ ಸಿದ್ದಿ ಬಾವಿಯಲ್ಲಿ ಬಿದ್ದು ಸಾವಿಗೀಡಾದ ಮಗು. ಕುಜರತಲಿ ಹಾಗೂ ಬಸೀರಾ ದಂಪತಿಗಳ ಕುಟುಂಬ 4 ದಿನಗಳ ಹಿಂದಷ್ಟೇ ಬಾಡಿಗೆಗೆ ಬಂದು ಈ ಮನೆಯಲ್ಲಿ ವಾಸವಾಗಿದ್ದರು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲಾಗಿತ್ತಾದರೂ ಅವರು ಸ್ಥಳಕ್ಕೆ ಆಗಮಿಸುವ ಮುನ್ನ ಬಾವಿಯಲ್ಲಿ ಬಿದ್ದಿದ್ದ ಮಗುವನ್ನು ಸ್ಥಳೀಯ ಯುವಕ ಮೌಲಾಲಿ ಸಿದ್ದಿನ ಮಗುವನ್ನು ಮೇಲೆತ್ತಿದ್ದ.
ಆದರೆ, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯ ಮಗು ಸಾವಿಗೀಡಾಗಿದೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.