ಕರ್ನಾಟಕ

karnataka

ETV Bharat / state

ಅತಿವೃಷ್ಟಿಗೆ ಘೋಷಿಸಿದ್ದ ಅನುದಾನದಲ್ಲಿ ಗುತ್ತಿಗೆದಾರರಿಗೆ 80 ಕೋಟಿ ಪಾವತಿಸಲು ಬಾಕಿ

ಕಳೆದ ವರ್ಷ ಉತ್ತರಕನ್ನಡ ಜಿಲ್ಲೆಗೆ ಘೋಷಣೆ ಮಾಡಿದ್ದ 200 ಕೋಟಿ ರೂ ಅನುದಾನದಲ್ಲಿ ಗುತ್ತಿಗೆದಾರರಿಗೆ ಕೇವಲ 120 ಕೋಟಿ ಪಾವತಿಯಾಗಿದ್ದು,ಉಳಿದ 80 ಕೋಟಿ ಪಾವತಿಯಾಗದೇ ಹಾಗೇ ಉಳಿದಿದೆ. ಇದರಿಂದಾಗಿ ಗುತ್ತಿಗೆದಾರರು ಕಷ್ಟಪಡುವಂತಾಗಿದೆ.

80-crores-not-paid-to-the-contractors-in-uttharakannada
ಅತಿವೃಷ್ಟಿಗೆ ಘೋಷಿಸಿದ್ದ ಅನುದಾನದಲ್ಲಿ ಗುತ್ತಿಗೆದಾರರಿಗೆ 80 ಕೋಟಿ ಪಾವತಿಸಲು ಬಾಕಿ

By

Published : Aug 18, 2022, 9:07 AM IST

ಶಿರಸಿ:ಕಳೆದ ಜು‌.26 ಕ್ಕೆ ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಸಂದಿದೆ. ಆದರೆ, ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮಾರನೇ ದಿನವೇ ಉತ್ತರ ಕನ್ನಡ ಜಿಲ್ಲೆಗೆ ಘೋಷಿಸಿದ್ದ ಅನುದಾನದಲ್ಲಿ ವಿವಿಧ ಗುತ್ತಿಗೆದಾರರಿಗೆ ಬರೋಬ್ಬರಿ 80 ಕೋಟಿ ರೂ. ಪಾವತಿಸಲು ಬಾಕಿಯಿದ್ದು, ಕೆಲಸ ಮುಗಿದರೂ ಹಣ ನೀಡದಿರುವುದು ಗುತ್ತಿಗೆದಾರರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಅಲ್ಲದೇ ಇದರಿಂದ ಈ ಬಾರಿಯ ಅತಿವೃಷ್ಟಿ ಕಾಮಗಾರಿ ಅಡಿ ಹಲವು ರಸ್ತೆಗಳು ಅಭಿವೃದ್ಧಿ ಆಗಬೇಕಿದ್ದು, ಇದೂ ನೆನೆಗುದಿಗೆ ಬೀಳುವ ಆತಂಕ ಎದುದರಾಗಿದೆ.

2021ರಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಹಾನಿಯಾಗಿತ್ತು. ರಸ್ತೆ, ಸೇತುವೆಗಳು ನೀರು ಪಾಲಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ 200 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಆದರೆ, ಕೆಲಸ ಮುಗಿದು ಹಲವು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ 80 ಕೋಟಿ ರೂ. ಪಾವತಿಸಲು ಬಾಕಿಯಿದೆ ಎಂದು ಹೇಳಲಾಗಿದೆ.

ಅತಿವೃಷ್ಟಿಗೆ ಘೋಷಿಸಿದ್ದ ಅನುದಾನದಲ್ಲಿ ಗುತ್ತಿಗೆದಾರರಿಗೆ 80 ಕೋಟಿ ಪಾವತಿಸಲು ಬಾಕಿ

ಅಲ್ಲದೇ ಇಲ್ಲಿನ ಹಲವು ರಸ್ತೆಗಳು ಈಗಾಗಲೇ ಹಾಳಾಗಿದ್ದು, ಕಳಪೆ ಕಾಮಗಾರಿ ಮಾಡಿರುವ ಆರೋಪವೂ ಕೇಳಿ ಬಂದಿದೆ. ಇದಲ್ಲದೇ ಹಣ ಬಿಡುಗಡೆಗೆ ಶೆ. 40 ರಷ್ಟು ಕಮಿಷನ್ ಆರೋಪವು ಕೇಳಿ ಬಂದಿದೆ. ಕಳಪೆ ರಸ್ತೆಯಿಂದಾಗಿ ಸಾರ್ವಜನಿಕರು ಕಷ್ಟಪಡುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದ್ದಾರೆ.

ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಜಿಲ್ಲೆಗೆ ಭೇಟಿ ನೀಡಿ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಅವರ ಜೊತೆಗೆ ಕಾರ್ಮಿಕ ಸಚಿವ ಹೆಬ್ಬಾರ್ ಕೂಡ ಇದ್ದರು. ಆದರೆ, ಹಣ ಬಾರದಿರುವ ಕಾರಣ ಸಚಿವರೂ ಏನೂ ಮಾಡುವಂತಿಲ್ಲ. ಆದರೆ, ಸಚಿವರು ಮಾತ್ರ ಇದನ್ನು ಸಮರ್ಥನೆ ಮಾಡಿಕೊಂಡಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ 80 ಕೋಟಿ ರೂ. ನಷ್ಟು ದೊಡ್ಡ ಮೊತ್ತ ಜಿಲ್ಲೆಯ ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿದ್ದು, ಇನ್ನಷ್ಟು ವಿಳಂಬ ಮಾಡದೇ ಅನುದಾನ ಬಿಡುಗಡೆ ಮಾಡಬೇಕಿದೆ. ಅಲ್ಲದೇ ಕಳಪೆ ಕಾಮಗಾರಿ ತಡೆದು, ಈ ಬಾರಿ ಆಗಬೇಕಾದ ಕೆಲಸವನ್ನೂ ಶೀಘ್ರವಾಗಿ ಮಾಡಬೇಕಿದೆ.

ಇದನ್ನೂ ಓದಿ :ವರ್ಷದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಕೇಂದ್ರವಾದ ಕಾವೇರಿ: ಬಿಎಸ್​ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಮುಖಂಡರು

ABOUT THE AUTHOR

...view details