ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ ಮತ್ತೆ 80 ಜನರಿಗೆ ಕೊರೊನಾ....113 ಮಂದಿ ಗುಣಮುಖ - Uttarakannada latest news

ಇಂದು 80 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 3,448 ಸೋಂಕಿತರ ಪೈಕಿ ಈವರೆಗೆ 2,533 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Uttarakannada covid case's
Uttarakannada covid case's

By

Published : Aug 18, 2020, 6:48 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 80 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 3,448ಕ್ಕೆ ತಲುಪಿದೆ.

ಹಳಿಯಾಳದಲ್ಲಿ 21, ಕುಮಟಾದಲ್ಲಿ 16, ಸಿದ್ದಾಪುರದಲ್ಲಿ 15, ಶಿರಸಿಯಲ್ಲಿ 9, ಮುಂಡಗೋಡದಲ್ಲಿ 7, ಕಾರವಾರ, ಭಟ್ಕಳದಲ್ಲಿ ತಲಾ 5, ಅಂಕೋಲಾ, ಜೊಯಿಡಾದ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಒಟ್ಟು 113 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಹಳಿಯಾಳದಲ್ಲಿ 42, ಕಾರವಾರದ 17, ಭಟ್ಕಳದ 15, ಹೊನ್ನಾವರದ 14, ಯಲ್ಲಾಪುರದ 8, ಅಂಕೋಲಾದ 5, ಕುಮಟಾ, ಶಿರಸಿಯ ತಲಾ 4, ಮುಂಡಗೋಡದ 2 ಹಾಗೂ ಜೊಯಿಡಾ, ಸಿದ್ದಾಪುರದ ತಲಾ ಒರ್ವರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

3,448 ಸೋಂಕಿತರ ಪೈಕಿ ಈವರೆಗೆ 2,533 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುತ್ತಾರೆ. ಒಟ್ಟು 34 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 881 ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ.

ABOUT THE AUTHOR

...view details